ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾಕ್ಕೆ ಕೊನೆಗೂ ತಿರುಗೇಟು ನೀಡುವಲ್ಲಿ ಟೀಮ್ ಇಂಡಿಯಾ ಸಫಲವಾಗಿದ್ದು, ಮೂರನೇ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ಸಾರಥ್ಯದ ಟೀಮ್ ಇಂಡಿಯಾ 48 ರನ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ,179 ರನ್ ಬಾರಿಸಿತ್ತು.180 ರನ್ ಗಳ ಸವಾಲಿನ ಮೊತ್ತವನ್ನು ಚೇಸಿಂಗ್ ಮಾಡಲು ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ, ಯಜುವೇಂದ್ರ ಚಾಹಲ್ (30ಕ್ಕೆ 3) ಹಾಗೂ ಹರ್ಷಲ್ ಪಟೇಲ್ (25ಕ್ಕೆ 4) ಮಧ್ಯಮ ಓವರ್ಗಳಲ್ಲಿ ನೀಡಿದ ಘಾತಕ ದಾಳಿಯಿಂದಾಗಿ 19.1 ಓವರ್ ಗಳಲ್ಲಿ 131 ರನ್ ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
ಇದರೊಂದಿಗೆ ಟೀಮ್ ಇಂಡಿಯಾ ಐದು ಪಂದ್ಯಗಳ ಸರಣಿಯಲ್ಲಿ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿದೆ.