ಹೊಸ ದಿಗಂತ ವರದಿ, ರಾಮನಗರ:
ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಯುವಕ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಕಿರಣ್ (29) ಮೃತ ದುರ್ದೈವಿ. ರಾಮನಗರ ತಾಲೂಕಿನ ಅಕ್ಕೂರು ಗ್ರಾಮದ ಕೆನರಾ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಅಕ್ಕೂರು ಗ್ರಾಮದಿಂದ ರಾಮನಗರಕ್ಕೆ ಬೈಕ್ನಲ್ಲಿ ಬರುತ್ತಿದ್ದ.
ಮಳೆ ಹಿನ್ನೆಲೆ ನಿನ್ನೆ ರಾತ್ರಿ ಬಿರುಗಾಳಿ ಜೋರಾಗಿತ್ತು. ಕಿರಣ್ ಇದ್ದ ಬೈಕ್ ಮೇಲೆ ರಸ್ತೆಬದಿಯ ಮರ ಬಿದ್ದಿದೆ. ಗಂಭೀರ ಗಾಯಗೊಂಡ ಕಿರಣ್ ಸ್ಥಳಕ್ಕೆ ಕೊನೆಯುಸಿರೆಳೆದರು.
ಆಂಧ್ರಪ್ರದೇಶದ ವಿಜಯವಾಡ ಮೂಲದ ಕಿರಣ್, ರಾಮನಗರ ಟೌನ್ನಲ್ಲಿ ಪತ್ನಿ ಮತ್ತು ಮಗು ಜತೆ ವಾಸವಿದ್ದರು. ಕಿರಣ್ ಸಾವಿನ ಸುದ್ದಿ ಕೇಳಿ ಕಿರಣ್ರ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.