ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಕ್ರಿಕೆಟ್ ಎಂದರೆ ಕೇವಲ ಆಟವಲ್ಲ, ಅದು ಒಂದು ಭಾವನೆ. ಪುರುಷರ ಕ್ರಿಕೆಟ್‌ನಷ್ಟು ಜನಪ್ರಿಯತೆ ಈಗ ಮಹಿಳಾ ಕ್ರಿಕೆಟ್‌ಗೂ ಸಿಕ್ಕಿದೆ. ಮಹಿಳಾ ಕ್ರಿಕೆಟಿಗರು ತಮ್ಮ ಪ್ರತಿಭೆ, ಶ್ರಮ ಮತ್ತು ಅದಮ್ಯ ಚೇತನದಿಂದ ಕೇವಲ ಮೈದಾನದಲ್ಲೇ ಅಲ್ಲ, ಆರ್ಥಿಕ ಅಂಗಳದಲ್ಲಿಯೂ ದೊಡ್ಡ ಹೆಸರು ಮಾಡುತ್ತಿದ್ದಾರೆ. ಇಂದು ಅವರು ಬ್ರ್ಯಾಂಡ್ ಅಂಬಾಸಿಡರ್‌ಗಳು, ಪ್ರೇರಣಾದಾಯಕ ನಾಯಕಿಯರು ಹಾಗೂ ಕೋಟ್ಯಧಿಪತಿಗಳಾಗಿದ್ದಾರೆ.
ಅವರಲ್ಲಿ ಮೊದಲ ಹೆಸರೇ ಮಾಜಿ ನಾಯಕಿ ಮಿಥಾಲಿ ರಾಜ್. ಕೇವಲ 10ನೇ ವಯಸ್ಸಿನಿಂದಲೇ ಕ್ರಿಕೆಟ್ ಆಡತೊಡಗಿದ ಮಿಥಾಲಿ, ನಂತರ ಟೀಂ ಇಂಡಿಯಾ ನಾಯಕಿಯಾದರು. ಅತಿ ಹೆಚ್ಚು ರನ್ ಗಳಿಸಿದ ಮಹಿಳಾ ಕ್ರಿಕೆಟಿಗೆಯಾಗಿ ದಾಖಲೆ ಬರೆದಿರುವ ಅವರು ಸುಮಾರು ₹40-45 ಕೋಟಿ ನಿವ್ವಳ ಮೌಲ್ಯದೊಂದಿಗೆ ಭಾರತದ ಶ್ರೀಮಂತ ಕ್ರಿಕೆಟಿಗರ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮುಂದಿನ ಹೆಸರು ಸ್ಮೃತಿ ಮಂಧಾನ. ಈ ಕ್ರಿಕೆಟ್ ಸುಂದರಿ ಭಾರತದ ಯುವ ಪೀಳಿಗೆಯ ಐಕಾನ್ ಆಗಿದ್ದಾರೆ. ಅವರ ನಿವ್ವಳ ಮೌಲ್ಯ ಸುಮಾರು ₹32-34 ಕೋಟಿ. ಸ್ಮೃತಿ ಬಿಸಿಸಿಐಯ ಗ್ರೇಡ್ ಎ ಒಪ್ಪಂದದಿಂದ ರೂ 50 ಲಕ್ಷ ಹಾಗೂ ವುಮೆನ್ಸ್ ಪ್ರೀಮಿಯರ್ ಲೀಗ್‌ನಿಂದ ರೂ 3.4 ಕೋಟಿ ಗಳಿಸುತ್ತಾರೆ. ನೈಕ್, ಹುಂಡೈ, ರೆಡ್ ಬುಲ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಮುಖವಾಗಿ ಕಾಣಿಸುತ್ತಿದ್ದಾರೆ.
ಇನ್ನೊಬ್ಬ ಹೆಸರು ಹರ್ಮನ್‌ಪ್ರೀತ್ ಕೌರ್. ಭಾರತದ ಪ್ರಸ್ತುತ ನಾಯಕಿ ಆಗಿರುವ ಹರ್ಮನ್, ವಿಶ್ವಕಪ್ ಗೆಲುವಿನ ಬಳಿಕ ರಾಷ್ಟ್ರಪ್ರಸಿದ್ಧಿ ಪಡೆದರು. ಅವರ ನಿವ್ವಳ ಮೌಲ್ಯ ಸುಮಾರು ₹25 ಕೋಟಿ. ಬಿಸಿಸಿಐ ಒಪ್ಪಂದ, ಮುಂಬೈ ಇಂಡಿಯನ್ಸ್ ಜೊತೆಗಿನ WPL ಒಪ್ಪಂದ ಮತ್ತು ಬ್ರ್ಯಾಂಡ್ ಡೀಲ್‌ಗಳ ಮೂಲಕ ಅವರು ಲಕ್ಷಾಂತರ ಗಳಿಸುತ್ತಿದ್ದಾರೆ. ಜೊತೆಗೆ ಪಂಜಾಬ್ ಪೊಲೀಸಿನಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದಾರೆ.

