ತಾಲೀಬಾನಿಗಳ ಪ್ರಕಾರ ʼಹಿಜಾಬ್‌ ಧರಿಸದ ಮಹಿಳೆಯರು ಪ್ರಾಣಿಗಳಂತೆʼ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಮ್ಮ ದೇಹವನ್ನು ಸಂಪೂರ್ಣವಾಗಿ ಮರೆಮಾಚುವ ಹಿಜಬ್ ಧರಿಸದ ಮುಸ್ಲಿಂ ಮಹಿಳೆಯರು ‘ಪ್ರಾಣಿಗಳಂತೆ ಕಾಣಲು ಪ್ರಯತ್ನಿಸುವವರು’ ಎಂಬ ಬರಹಗಳಿರುವ ಪೋಸ್ಟರ್‌ ಗಳನ್ನು ತಾಲಿಬಾನ್‌ಗಳ ʼನೈತಿಕ ಪೊಲೀಸ್‌ ಪಡೆʼ ಕಂದಹಾರ್‌ ನಗರದೆಲ್ಲೆಡೆ  ವ್ಯಾಪಕವಾಗಿ ಅಂಟಿಸಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನಿಗಳು ತಮ್ಮ ಕಠಿಣ ಇಸ್ಲಾಮಿಕ್ ಆಡಳಿತಕ್ಕೆ ಹಿಂತಿರುಗುವ ಲಕ್ಷಣಗಳನ್ನು ಈಗ ದೊಡ್ಡಮಟ್ಟದಲ್ಲಿ ಪ್ರಕಟ ಪಡಿಸುತ್ತಿದ್ದಾರೆ.
9/11 ದಾಳಿಯ ನಂತರ ಅಮೇರಿಕಾದ ಕಣ್ಗಾವಲಿನಲ್ಲಿದ್ದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳು ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿದ್ದವು. ಈಗ ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್‌ ಮತ್ತೆ ಬರ್ಬರ ಅನಾರಿಕತ್ವ  ಸ್ಥಿತಿಯತ್ತ ಸಾಗುತ್ತಿದೆ.
ಮೇ ತಿಂಗಳಲ್ಲಿ, ದೇಶದ ಸರ್ವೋಚ್ಚ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂಡ್ಜಾದಾ ಅವರು ಮಹಿಳೆಯರು ಮನೆಯೊಳಗೇ ಇರಬೇಕು ಎಂಬ ಕಟ್ಟಪ್ಪಣೆ ಹೊರಡಿಸಿದ್ದ.
ಅವರು ಸಾರ್ವಜನಿಕವಾಗಿ ಹೊರಗೆ ಹೋಗಬೇಕಾದರೆ ತಮ್ಮ ಮುಖಗಳನ್ನು ಸಂಪೂರ್ಣವಾಗಿ ಹಿಜಾಬ್‌ ನಿಂದ ಮುಚ್ಚಿಕೊಳ್ಳುವಂತೆ ಆದೇಶಿಸಲಾಗಿತ್ತು. ಈ ವಾರ, ತಾಲಿಬಾನ್‌ನ ಉಗ್ರ ಸಚಿವಾಲಯವು ಇಸ್ಲಾಂನ ಗುಂಪಿನ ಕಟ್ಟುನಿಟ್ಟಿನ ಕಾಯ್ದೆಗಳನ್ನು ಮಹಿಳೆಯರ ಮೇಲೆ ಹೇರಿದೆ. ಬುರ್ಖಾ ಧರಿಸದೆ ಹೊರಬರದಂತೆ ಕಂದಹಾರ್ ನಗರದ ಮಹಿಳೆಯರಿಗೆ ಪೋಸ್ಟರ್‌ಗಳ ಮೂಲಕ ಎಚ್ಚರಿಸಲಾಗಿದೆ.
“ಹಿಜಾಬ್ ಧರಿಸದ ಮಹಿಳೆಯರು ಪ್ರಾಣಿಗಳಂತೆ ಕಾಣಲು ಪ್ರಯತ್ನಿವವರು ಎಂದು ಪೋಸ್ಟರ್‌ ಗಳಲ್ಲಿ ವ್ಯಂಗ್ಯವಾಗಿ ಬರೆಯಲಾಗಿದೆ. ಇದನ್ನು ಅನೇಕ ಕೆಫೆಗಳು ಮತ್ತು ಅಂಗಡಿಗಳ ಮೇಲೆ ಎಲ್ಲರಿಗೂ ಕಾಣುವಂತೆ ಹಾಕಲಾಗಿದೆ.
ಚಿಕ್ಕದಾದ, ಬಿಗಿಯಾದ ಮತ್ತು ಪಾರದರ್ಶಕವಾದ ಬಟ್ಟೆಗಳನ್ನು ಧರಿಸುವುದು ಅಖುಂದ್‌ಜಾದಾ ಅವರ ಆದೇಶಕ್ಕೆ ವಿರುದ್ಧವಾಗಿದೆ ಎಂದು ಪೋಸ್ಟರ್‌ಗಳು ಹೇಳುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!