ಅಗ್ನಿವೀರರರಿಗೆ ಸಿಎಪಿಎಫ್‌, ಅಸ್ಸಾಂ ರೈಫಲ್‌ಗಳಲ್ಲಿ ಮೀಸಲಾತಿ ಘೋಷಿಸಿದ ಗೃಹಸಚಿವಾಲಯ : ವಯೋಮಿತಿಯಲ್ಲಿಯೂ ಸಡಿಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೇಂದ್ರದ ಅಗ್ನಿಪಥ ಯೋಜನೆಯ ಕುರಿತು ದೇಶದ ಹಲವೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕೆಲವೆಡೆ ಪ್ರತಿಭಟನೆ ಹಿಮಸಾರೂಪಕ್ಕೆ ತಿರುಗಿದ್ದು ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಕೆಲವು ಪ್ರಯಾಣಿಕರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ದೇಶದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

ಇವೆಲ್ಲದರ ನಡುವೆ ಕೇಂದ್ರ ಗೃಹ ಸಚಿವಾಲಯ ಹೊಸ ಘೋಷಣೆಯೊಂದನ್ನು ಮಾಡಿದ್ದು ಕೇಂದ್ರ ಸಶಸ್ತ್ರ ಪೋಲೀಸ್‌ ಪಡೆ (CAPF) ಹಾಗೂ ಅಸ್ಸಾಂ ರೈಫಲ್ಸ್‌ (AR) ಗಳಲ್ಲಿ 10% ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಿದೆ. ಅಲ್ಲದೇ ವಯೋಮಿತಿಯಲ್ಲಿಯೂ ಕೂಡ ಸಡಿಲಿಕೆ ನೀಡಲಾಗಿದೆ. ಈ ಕುರಿತು ಗೃಹ ಸಚಿವಾಲಯವು ಟ್ವೀಟ್‌ ಮಾಡಿದ್ದು “ಗೃಹ ವ್ಯವಹಾರಗಳ ಸಚಿವಾಲಯ (MHA) ಸಿಎಪಿಎಫ್‌ ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ಅಗ್ನಿವೀರ್‌ಗಳಿಗಾಗಿ ನೇಮಕಾತಿಗಾಗಿ 10% ಖಾಲಿ ಹುದ್ದೆಗಳನ್ನು ಕಾಯ್ದಿರಿಸಲು ನಿರ್ಧರಿಸಿದೆ” ಎಂದು ಹೇಳಿದೆ.

ಅಲ್ಲದೇ “CAPF ಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಅಗ್ನಿವೀರ್‌ಗಳಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲು MHA ನಿರ್ಧರಿಸುತ್ತದೆ. ಇದಲ್ಲದೆ, ಅಗ್ನಿವೀರ್‌ನ ಮೊದಲ ಬ್ಯಾಚ್‌ಗೆ, ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 5 ವರ್ಷಗಳವರೆಗೆ ವಯಸ್ಸಿನ ಸಡಿಲಿಕೆ ಇರುತ್ತದೆ” ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!