ಹೊಸದಿಗಂತ ವರದಿ ಮಂಡ್ಯ:
ಮಂಡ್ಯದ ಮೇಲುಕೋಟೆ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ಗೂಡ್ಸ್ ಟೆಂಪೋಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ವಾಹನ ಸುಟ್ಟು ಕರಕಲಾಗಿದೆ. ಮಂಡ್ಯದ ಗುತ್ತಲು ನಿವಾಸಿ ಸಿ. ಸುರೇಶ್ ಎಂಬುವವರಿಗೆ ಸೇರಿದ ಈ ಗೂಡ್ಸ್ ಟೆಂಪೋಗೆ ನಗರದ ಹೊರ ವಲಯದಲ್ಲಿರುವ ಸಿಮೆಂಟ್ ಗೋಡೌನ್ ಬಳಿ ಬೆಂಕಿ ಹೊತ್ತಿಕೊಂಡಿದೆ. ಸದ್ಯ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಗ್ನಿ ಅವಘಡದಿಂದ ಟೆಂಪೋ ಸುಟ್ಟುಹೋಗಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ರೂ. ನಷ್ಟವಾಗಿದೆ ಎಂದು ಟೆಂಪೋ ಮಾಲೀಕ ಸುರೇಶ್ ತಿಳಿಸಿದ್ದಾರೆ.