ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಬಿಗ್ ಬಾಸ್ ನ ಸೀಸನ್ 7 ಗೆ ಅದ್ದೂರಿ ತೆರೆ ಬಿದ್ದಿದ್ದು, ಗ್ರ್ಯಾಂಡ್ ಫಿನಾಲೆಯಲ್ಲಿ ನಿರೂಪಕಿಯಾಗಿ ಹೆಸರು ಮಾಡಿರುವ ಕಿರುತೆರೆಯ ನಾಯಕಿಯಾಗಿಯೂ ಆಗಿರುವ ಅನುಮೋಲ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ.
45 ಲಕ್ಷ ರೂ , ಒಂದು ಕಾರು ಮತ್ತು ಸೀಸನ್ 7 ಟ್ರೋಫಿಯನ್ನು ಗೆದ್ದಿದ್ದಾರೆ. ಅನೀಶ್, ಶಾನವಾಸ್, ಅಕ್ಬರ್ ಖಾನ್ ಮತ್ತು ನೆವಿನ್‌ರನ್ನು ಹಿಂದಿಕ್ಕಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಅನೀಶ್ ಕೊನೆಯವರೆಗೂ ತೀವ್ರವಾಗಿ ಪ್ರಯತ್ನಿಸಿದರು ಅನೀಶ್ ಎರಡನೇ ಸ್ಥಾನ ಪಡೆದರು, ಶಾನವಾಸ್ ಮೂರನೇ ಸ್ಥಾನ ಪಡೆದರು.
ಇನ್ನೂ ಈ ಬಾರಿ ಮಲಯಾಳಂನ ‘ಬಿಗ್ ಬಾಸ್ ಮನೆಯಲ್ಲಿ ಜನಸಾಮಾನ್ಯರಿಗೆ ಕೂಡ ಅವಕಾಶ ನೀಡಲಾಗಿತ್ತು. ಬರಹಗಾರ ಮತ್ತು ವ್ಲಾಗರ್ ಆದ ಅನೀಶ್ ಟಿಎ ಅವರನ್ನು ಈ ಬಾರಿ ಆಯ್ಕೆ ಮಾಡಲಾಗಿತ್ತು.
5 ಜನ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಹೋಗಿದ್ದರು. ಆ ಪೈಕಿ ಸಲಿಂಗ ವಿವಾಹವಾದ LGBTQ+ ಸಮುದಾಯದ ಪರ ಕಾನೂನು ಹೋರಾಟವನ್ನು ಕೂಡ ಮಾಡುವ ಅಧಿಲಾ ಮತ್ತು ನೂರಾ ಕೂಡ ಹೋಗಿದ್ದರು. ಅನೇಕರು ಈ ಬಾರಿಯ ”ಬಿಗ್ ಬಾಸ್” ಗೆಲ್ಲುವುದು ಇವರೇ ಎಂದು ಅಂದುಕೊಂಡಿದ್ದರು.

