May 31, 2026
Sunday, May 31, 2026
spot_img

ಉಬರ್‌ನಲ್ಲೇ ಉಳಿದಿತ್ತು ಹಣ, ಇಂಪಾರ್ಟೆಂಟ್‌ ಡಾಕ್ಯುಮೆಂಟ್ಸ್‌ ಇದ್ದ ಪರ್ಸ್‌, ಡ್ರೈವರ್‌ ಮಾಡಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಉಬರ್‌ ಡ್ರೈವರ್‌ ಒಬ್ಬರು ವ್ಯಕ್ತಿ ಕಾರ್‌ನಲ್ಲೇ ಬಿಟ್ಟು ಹೋಗಿದ್ದ ಪರ್ಸ್‌ನ್ನು ವಾಪಾಸ್‌ ನೀಡಿದ್ದಾರೆ. ಇದು ಮಾನವೀಯತೆ ಉಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಈ ಬಗ್ಗೆ ಗ್ರಾಹಕ ಹರ್ಷ ಗುಪ್ತಾ ಮಧುಸೂಧನ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ. ನಾನು ಉಬರ್‌ನಲ್ಲಿ ನನ್ನ ಪರ್ಸ್‌ನ್ನು ಬಿಟ್ಟು ಬಂದಿದ್ದೆ. ಅದರಲ್ಲಿ ದುಡ್ಡು, ಪ್ರಮುಖ ಡಾಕ್ಯುಮೆಂಟ್ಸ್‌ ಇತ್ತು. ನನ್ನ ಬಳಿ ಪರ್ಸ್‌ ಇಲ್ಲ ಎಂದು ತಿಳಿದೇ ಇರಲಿಲ್ಲ. ಅಷ್ಟೊತ್ತಿಗೆ ಉಬರ್‌ ಡ್ರೈವರ್‌ನಿಂದ ಕರೆ ಬಂತು. ನಾನು ಕಾನ್ಫರೆನ್ಸ್‌ಗೆ ಹೋಗುತ್ತಿದೆ. ಮೂರು ಬಾರಿ ಡ್ರೈವರ್‌ ಕರೆ ಮಾಡಿದ್ದಾರೆ. ನಾನು ತೆಗೆದಿರಲಿಲ್ಲ.

ಅದಾದ ನಂತರ ನಾನೇ ಕರೆ ಮಾಡಿ ಕೇಳಿದೆ. ಆಗ ನಿಮ್ಮ ಪರ್ಸ್‌ ಬಿಟ್ಟು ಹೋಗಿದ್ದೀರಿ ಎಂದರು. ನಾನು ತಕ್ಷಣ ನೆನಪಿಸಿಕೊಂಡೆ. ಒಂದು ಲೊಕೇಷನ್‌ಗೆ ಬಂದು ಅದನ್ನು ಕೊಟ್ಟರು. ನಾನು ದುಡ್ಡು ಕೊಡಲು ಹೋದಾಗ ಬಹಳ ನಾಚಿಕೆಯಿಂದ ಬೇಡ ಎಂದರು. ನಾನೇ ಫೋರ್ಸ್‌ ಮಾಡಿ ಕೊಟ್ಟೆ. ಈ ಜಗತ್ತಲ್ಲಿ ಎಷ್ಟೊಂದು ಒಳ್ಳೆಯತನ ಇದೆ. ಥ್ಯಾಂಕ್ಯೂ ಯಂಗ್‌ ಮ್ಯಾನ್‌. ಅವರ ಹೆಸರು ತೊಗುರು, ಉಬರ್‌ ಇಂಡಿಯಾ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಹೈಕ್‌ ಅಥವಾ ಬೋನಸ್‌ ನೀಡಿ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !