ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಆಕರ್ಷಣೆಗೆ ಕಾರಣವಾಗಲಿರುವ ಮೈಸೂರಿನ ಅರಮನೆ ಆವರಣದಲ್ಲಿನ ಸ್ಥಾಪಿಸಲಾಗಿರುವ ನೂತನ ವಸ್ತು ಸಂಗ್ರಹಾಲಯ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ 8ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ವೇದಿಕೆಯಿಂದ ನೇರವಾಗಿ ಅರಮನೆ ಆವರಣ ತಲುಪಿದ ಪ್ರಧಾನಿ ನೂತನ ವಸ್ತು ಸಂಗ್ರಹಾಲಯ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಇದೇ ಸಂದರ್ಭ ವಸ್ತು ಸಂಗ್ರಹಾಲಯ ಕೇಂದ್ರದಲ್ಲಿರುವ ಡಿಜಿಟಲ್ ಯೋಗ ಕೇಂದ್ರವನ್ನೂ ಉದ್ಘಾಟಿಸಿದ ಅವರು, ಅದರ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದು ಖುಷಿಪಟ್ಟರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಜೊತೆಗಿದ್ದಾರೆ.