Tuesday, November 11, 2025

Kitchen tips | ಅಡುಗೆ ಮನೆಯಲ್ಲಿ ಗ್ಯಾಸ್ ಲೀಕ್ ಆದ್ರೆ ಏನು ಮಾಡ್ಬೇಕು? ಈ ವಿಷ್ಯ ಸರಿಯಾಗಿ ತಿಳ್ಕೊಳಿ

ಮನೆಯಲ್ಲಿ ಅಡುಗೆ ಮಾಡುವಾಗ ಸುರಕ್ಷತೆ ಅತ್ಯಂತ ಮುಖ್ಯ. ಅಡುಗೆಮನೆಯಲ್ಲಿ ಗ್ಯಾಸ್ ಲೀಕ್ (Gas Leak) ಆಗುವುದು ಸಾಮಾನ್ಯವಾದರೂ, ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಾಗಿದೆ. ಕೆಲವೊಮ್ಮೆ ಅಲ್ಪ ಅಜಾಗರೂಕತೆಯೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಗ್ಯಾಸ್ ಸೋರಿಕೆ ಆಗುತ್ತಿದ್ದಂತೆಯೇ ಆತಂಕಪಡದೇ, ಶಾಂತವಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದು ಜೀವ ಉಳಿಸಲು ಸಹಾಯಕವಾಗುತ್ತದೆ.

ತಕ್ಷಣ ಗ್ಯಾಸ್ ಸ್ಟವ್ ಆಫ್ ಮಾಡಿ:

ಗ್ಯಾಸ್ ಸೋರಿಕೆಯ ವಾಸನೆ ಬಂದ ಕೂಡಲೇ ಮೊದಲು ಸ್ಟವ್‌ನ ಬಟನ್‌ಗಳನ್ನು ಆಫ್ ಮಾಡಬೇಕು. ಸಿಲಿಂಡರ್‌ನ ರೆಗ್ಯುಲೇಟರ್‌ ನ್ನೂ ಕೂಡ ತಕ್ಷಣ ಮುಚ್ಚಿ ಬಿಡಬೇಕು. ಇದರಿಂದ ಗ್ಯಾಸ್ ಹರಿವು ತಕ್ಷಣ ನಿಲ್ಲುತ್ತದೆ.

ಯಾವುದೇ ರೀತಿಯ ಬೆಂಕಿ ಹಚ್ಚಬೇಡಿ:

ಮ್ಯಾಚ್‌ಸ್ಟಿಕ್, ಲೈಟರ್ ಅಥವಾ ಎಲೆಕ್ಟ್ರಿಕ್ ಸ್ವಿಚ್‌ಗಳನ್ನು ಕೂಡ ತಕ್ಷಣ ಬಳಸಬೇಡಿ. ಸಣ್ಣ ಕಿಡಿಯೂ ಗ್ಯಾಸ್‌ಗೆ ಸಂಪರ್ಕವಾದರೆ ಸ್ಫೋಟ ಸಂಭವಿಸಬಹುದು. ಆದ್ದರಿಂದ, ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಫ್ ಮಾಡದೇ ಇರಬೇಕು.

ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯಿರಿ:

ಗ್ಯಾಸ್ ವಾಸನೆ ಕಡಿಮೆಯಾಗಲು, ಎಲ್ಲ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯಿರಿ. ಹವಾ ಒಳಬಂದರೆ ಗ್ಯಾಸ್ ವಾತಾವರಣದಲ್ಲಿ ಬೆರೆತು ಅಪಾಯ ಕಡಿಮೆಯಾಗುತ್ತದೆ. ಈ ಕ್ರಮ ಗ್ಯಾಸ್ ಒತ್ತಡವನ್ನು ಕಡಿಮೆ ಮಾಡುತ್ತದೆ.

ಎಲ್ಲರನ್ನು ಮನೆಯಿಂದ ಹೊರಗೆ ಕಳುಹಿಸಿ:

ಸುರಕ್ಷತೆ ದೃಷ್ಟಿಯಿಂದ ಕುಟುಂಬದ ಎಲ್ಲ ಸದಸ್ಯರನ್ನು, ವಿಶೇಷವಾಗಿ ಮಕ್ಕಳನ್ನು ಮತ್ತು ಹಿರಿಯರನ್ನು ಹೊರಗೆ ಕಳುಹಿಸಿ. ಯಾರೂ ಒಳಗೆ ಉಳಿಯದಂತೆ ನೋಡಿಕೊಳ್ಳಿ. ಗ್ಯಾಸ್ ತೀವ್ರವಾಗಿದ್ದರೆ ಉಸಿರಾಟದ ತೊಂದರೆ ಉಂಟಾಗಬಹುದು.

ತಕ್ಷಣ ಸಹಾಯ ಕೋರಿ:

ಗ್ಯಾಸ್ ಕಂಪನಿಯ ತುರ್ತು ಸಂಖ್ಯೆಗೆ ಅಥವಾ ಅಗ್ನಿಶಾಮಕ ದಳಕ್ಕೆ ಸಂಪರ್ಕಿಸಿ. ತುರ್ತು ಸಿಬ್ಬಂದಿ ಬರುವವರೆಗೆ ಮನೆಯಲ್ಲಿ ಬೆಂಕಿ ಅಥವಾ ಸ್ವಿಚ್ ಬಳಸದೇ ಇರಬೇಕು.

ಗ್ಯಾಸ್ ಲೀಕ್ ಸಂಭವಿಸಿದಾಗ ಆತಂಕದಿಂದ ಏನೂ ಆಗುವುದಿಲ್ಲ. ಬದಲಾಗಿ ಶಾಂತವಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದು ಜೀವ ಉಳಿಸಲು ನೆರವಾಗುತ್ತದೆ. ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಪ್ರತಿಯೊಬ್ಬರೂ ಈ ಕ್ರಮಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ಸುರಕ್ಷತೆ ಅಂದರೆ — ಮುನ್ನೆಚ್ಚರಿಕೆ!

error: Content is protected !!