ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಬಂಧಿಸಲಾಗಿದೆ.
ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರುಪಡಿಸಿದ ನಂತರ ಅವರನ್ನು ಬಂಧಿಸಲಾಯಿತು.
ಸಿನಿಮಾಗಳಲ್ಲಿ ಪಾತ್ರ ನೀಡುವುದಾಗಿ ಹೇಳಿ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ನಟಿಯೂ ಆಗಿರುವ ಮಹಿಳೆಯೊಬ್ಬರು ವಿಜಯ್ ಬಾಬು ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ನಟನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.
ಜೂನ್ 22 ರಂದು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ನಟ ವಿಜಯ್ಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸುವಾಗ, ಈ ವೇಳೆ ಕೇರಳ ಹೈಕೋರ್ಟ್ ಈ ಸಮಯದಲ್ಲಿ ರಾಜ್ಯವನ್ನು ತೊರೆಯದಂತೆ ಮತ್ತು ಪಾಸ್ಪೋರ್ಟ್ ಮರಳಿಸುವಂತೆ ಕೇಳಿತ್ತು.
ಇದೀಗ ಇಂದಿನಿಂದ(ಜೂ.27) ಜುಲೈ 3 ರವರೆಗೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಅವರನ್ನು ಪ್ರಶ್ನಿಸಲು ತನಿಖಾ ತಂಡಕ್ಕೆ ಅನುಮತಿ ನೀಡಲಾಗಿದೆ.
ವಿಜಯ್ ಬಾಬು ವಿರುದ್ಧದ ಪ್ರಕರಣವೇನು?
ನಟ ವಿಜಯ್ ಬಾಬು ಎರ್ನಾಕುಲಂನಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ಯುವ ನಟಿಗೆ ಹಲವು ಬಾರಿ ಚಿತ್ರಹಿಂಸೆ ನೀಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ವಿಜಯ್ಬಾಬು ಆಕೆಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳ ಭರವಸೆಯನ್ನೂ ನೀಡಿದ್ದರು ಎಂದು ದೂರು ನೀಡಿರುವ ನಟಿ ಆರೋಪಿಸಿದ್ದಾರೆ.
ನಾನು ಪ್ರಜ್ಞಾಪೂರ್ವಕವಾಗಿ ಹೌದು ಅಥವಾ ಇಲ್ಲ ಎಂದು ಹೇಳಲು ಅಸಮರ್ಥಳಾಗಿದ್ದಾಗ, ಅವನು ನನ್ನ ದೇಹವನ್ನು ಆತನ ಸಂತೋಷಕ್ಕಾಗಿ ಬಳಸಿದ್ದಾನೆ. ಆತನ ನನ್ನ ಮೇಲೆ ಬಲತ್ಕಾರ ಮಾಡಿದ್ದಾನೆ. ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ. ಅಲ್ಲದೇ ನನ್ನ ಇಚ್ಛೆಗೆ ವಿರುದ್ಧವಾಗಿ ಮೌಖಿಕ ಸೆಕ್ಸ್ಗೆ ಒತ್ತಾಯಿಸಿದ್ದಾನೆ. ಈ ವೇಳೆ ನಾನು . ನಾನು ಆಘಾತಗೊಂಡ ಸ್ಥಿತಿಯಲ್ಲಿದ್ದೆ, ಮಾತನಾಡಲು ಅಥವಾ ಪ್ರತಿಕ್ರಿಯಿಸಲು ನಾನು ಅಸಮರ್ಥಳಾಗಿದ್ದೆ ಎಂದು ಸಂತ್ರಸ್ತೆ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದರು. ಆದರೆ ಏಪ್ರಿಲ್ 26 ರಂದು ವಿಜಯ್ ಬಾಬು ಈ ಆರೋಪಕ್ಕೆ ತಿರುಗೇಟು ನೀಡಿದ್ದರು. ಫೇಸ್ಬುಕ್ನಲ್ಲಿ ಲೈವ್ ಬಂದ ನಟ ವಿಜಯ್ ನನಗೆ ಚಿತ್ರಹಿಂಸೆ ನೀಡುತ್ತಿರುವುದು ಯುವತಿ ಎಂದು ಆರೋಪಿಸಿದ ಆತ ನಾನೇ ಈ ಪ್ರಕರಣದ ನಿಜವಾದ ಬಲಿಪಶು ಎಂದು ಹೇಳಿಕೊಂಡಿದ್ದರು.