ಮದುವೆ ಎಂಬುದು ಕೇವಲ ಇಬ್ಬರ ಬಂಧನವಲ್ಲ, ಅದು ಸಂಪ್ರದಾಯ, ನಂಬಿಕೆ ಮತ್ತು ಸಂಸ್ಕೃತಿಯ ಪ್ರತಿಬಿಂಬವೂ ಆಗಿದೆ. ಭಾರತದಾದ್ಯಂತ ಮದುವೆ ಸಮಯದಲ್ಲಿ ಮದುಮಗಳು ಕೆಂಪು ಬಣ್ಣದ ವಸ್ತ್ರವನ್ನು ಧರಿಸುವುದು ಸಾಮಾನ್ಯ ಸಂಪ್ರದಾಯವಾಗಿದೆ. ಆದರೆ ಯಾಕೆ ಈ ಕೆಂಪು ಬಣ್ಣಕ್ಕೇ ಇಷ್ಟು ಮಹತ್ವ? ಕೇವಲ ಅಲಂಕಾರಕ್ಕಾಗಿ ಅಲ್ಲ, ಇದರ ಹಿಂದೆ ಆಳವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅರ್ಥಗಳು ಅಡಗಿವೆ.
ಕೆಂಪು – ಶಕ್ತಿ ಮತ್ತು ಪ್ರೇಮದ ಸಂಕೇತ:
ಹಿಂದು ಸಂಪ್ರದಾಯದಲ್ಲಿ ಕೆಂಪು ಬಣ್ಣವನ್ನು ಶಕ್ತಿ, ಉತ್ಸಾಹ ಮತ್ತು ಪ್ರೇಮದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ದೇವಿ ಪಾರ್ವತಿಯ ಪ್ರಿಯವಾದ ಬಣ್ಣವೆಂದು ಇದಕ್ಕೆ ಗೌರವವಿದೆ. ಹೀಗಾಗಿ ವಧು ಕೆಂಪು ಬಣ್ಣದ ವಸ್ತ್ರ ಧರಿಸುವುದು ಆಕೆಯ ಜೀವನದಲ್ಲಿ ಹೊಸ ಶಕ್ತಿ ಮತ್ತು ಪ್ರೇಮದ ಆರಂಭವನ್ನು ಸೂಚಿಸುತ್ತದೆ.
ಹೊಸ ಜೀವನದ ಶುಭಾರಂಭ:
ಕೆಂಪು ಬಣ್ಣವನ್ನು ಶುಭದ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಮದುವೆಯಂತಹ ಪವಿತ್ರ ಸಂದರ್ಭಗಳಲ್ಲಿ ಈ ಬಣ್ಣ ಧರಿಸುವುದು ನವಜೀವನದ ಶುಭಾರಂಭಕ್ಕೆ ಆಶೀರ್ವಾದದಂತಿದೆ.
ಆಕರ್ಷಣೆ ಮತ್ತು ಆತ್ಮವಿಶ್ವಾಸ:
ಕೆಂಪು ಬಣ್ಣವು ಸಹಜವಾಗಿಯೇ ಗಮನ ಸೆಳೆಯುವ ಬಣ್ಣ. ಇದು ವಧುವಿನ ಸೌಂದರ್ಯವನ್ನು ಹೆಚ್ಚಿಸಿ, ಆಕೆಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಜೊತೆಗೆ ಮಾಡುವೆ ಮಂಟಪದಲ್ಲಿ ಈ ಬಣ್ಣ ಎದ್ದು ಕಾಣುತ್ತದೆ.
ಧಾರ್ಮಿಕ ಮಹತ್ವ:
ಹಿಂದು ಧರ್ಮದಲ್ಲಿ ಯಜ್ಞ, ಪೂಜೆ, ವಿವಾಹ ಮೊದಲಾದ ಶ್ರೇಷ್ಠ ಕಾರ್ಯಗಳಲ್ಲಿ ಕೆಂಪು ಬಣ್ಣದ ಪ್ರಾಮುಖ್ಯತೆ ಇದೆ. ಇದು ಶಕ್ತಿ ಮತ್ತು ಪವಿತ್ರತೆಯ ಸಂಯೋಜನೆಯಾಗಿದೆ.
ಶಾಶ್ವತವಾಗಿ ಉಳಿಯುವ ಬಣ್ಣ:
ಕೆಂಪು ಬಣ್ಣವು ಯಾವುದೇ ವಧುವಿಗೆ ಸರ್ವಕಾಲಿಕ ಅಚ್ಚುಮೆಚ್ಚಿನ ಬಣ್ಣವಾಗಿದೆ. ಈ ಬಣ್ಣ ಎಂದಿಗೂ ಹಳತ್ತು ಎನಿಸುವುದಿಲ್ಲ.

