ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತಾ ಪೊಲೀಸರು ನೂಪುರ್ ಶರ್ಮಾʼಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ .
ಅಮ್ಹೆರ್ಸ್ಟ್ ಸ್ಟ್ರೀಟ್ ಮತ್ತು ನರ್ಕೆಲ್ದಂಗಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಈಗಾಗಾಕೆ ಸಮನ್ಸ್ ನೀಡಿದ್ದು, ಆದರೆ ವಿಚಾರಣೆಯಿಂದ ನೂಪುರ್ಗೆ ಹಾಜರಾಗದ ಹಿನ್ನೆಲೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಕಳೆದ ತಿಂಗಳು ಆಕೆಯ ವಿರುದ್ಧ ಎಫ್ಐಆರ್ಗಳು ದಾಖಲಾದ ನಂತರ ಅಮ್ಹೆರ್ಸ್ಟ್ ಸ್ಟ್ರೀಟ್ ಮತ್ತು ನರ್ಕೆಲ್ದಂಗಾ ಪೊಲೀಸ್ ಠಾಣೆಗಳು ನೂಪುರ್ ಅವ್ರನ್ನ ಪ್ರತ್ಯೇಕವಾಗಿ ವಿಚಾರಣೆಗೆ ಕರೆದಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನು ಕೋಲ್ಕತಾಗೆ ಭೇಟಿ ನೀಡಿದ್ರೆ ತನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂಬ ಆತಂಕವನ್ನು ಶರ್ಮಾ ಉಲ್ಲೇಖಿಸಿದ್ದು, ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶವನ್ನ ಕೋರಿದ್ದರು.