Tuesday, November 11, 2025

ಬಿಹಾರ ಗದ್ದುಗೆಗೆ ಮತ್ತೊಮ್ಮೆ ಎನ್​ಡಿಎ: ಇದು ಎಕ್ಸಿಟ್‌ ಪೋಲ್‌ ರಿಸಲ್ಟ್‌, ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆದಿದ್ದರೆ ಎರಡನೇ ಹಂತದ ಮತದಾನ ಇಂದು ಮುಕ್ತಾಯವಾಗಿದೆ.

ಈ ಬಾರಿ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ. ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿವೆ.

ಬಿಹಾರದಲ್ಲಿ ಮೊದಲ ಹಂತದಲ್ಲಿ, 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಚುನಾವಣಾ ಫಲಿತಾಂಶ ನವೆಂಬರ್ 14ರಂದು ಹೊರಬೀಳಲಿದೆ.

ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಈ ಬಾರಿ ಸ್ಪಷ್ಟ ಮುನ್ನಡೆಯನ್ನು ಸಾಧಿಸಲಿವೆ ಎಂದು ಭವಿಷ್ಯ ನುಡಿದಿವೆ. ತೀವ್ರ ಪೈಪೋಟಿಯಿಂದ ಕೂಡಿರುವ ಈ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಣ ಎನ್‌ಡಿಎಗಿಂತ ಹಿಂದುಳಿದಿದೆ.

ಯಾವ ಸಮೀಕ್ಷೆ ಏನು ಹೇಳಿದೆ?:

ಪೀಪಲ್ಸ್ ಪಲ್ಸ್
ಎನ್‌ಡಿಎ 133-159 ಸ್ಥಾನ
ಮಹಾಘಟಬಂಧನ್ 75-101

ಪೀಪಲ್ಸ್ ಇನ್‌ಸೈಟ್‌
ಬಿಜೆಪಿ 68-72
ಜೆಡಿ(ಯು) 55-60
ಆರ್‌ಜೆಡಿ 65-72
ಕಾಂಗ್ರೆಸ್ 9-13
ಹೆಚ್‌ಎಎಂ 1-2
ಆರ್‌ಎಲ್‌ಎಂ 0-2

ಮ್ಯಾಟ್ರಿಜ್
ಎನ್‌ಡಿಎ 147-167
ಮಹಾಘಟಬಂಧನ್ 70-90

ದೈನಿಕ್‌ ಭಾಸ್ಕರ್‌
ಎನ್‌ಡಿಎ 145-160
ಮಹಾಘಟಬಂಧನ್‌ 73-91
ಜೆಎಸ್‌ಪಿ 0-0
ಇತರೆ 5-10

ಪೋಲ್‌ಸ್ಟ್ರಾಟ್
ಎನ್‌ಡಿಎ 133-148
ಮಹಾಘಟಬಂಧನ್ 87-102
ಜಾನ್ ಸೂರಾಜ್ 3-5

ಚಾಣಕ್ಯ
ಎನ್‌ಡಿಎ: 130-138
ಮಹಾಘಟ್‌ಬಂಧನ್‌: 100-108
ಇತರ: 3-5

ಜೆವಿಸಿ-ಟೈಮ್ಸ್‌ ನೌ
ಎನ್‌ಡಿಎ: 135-150
ಮಹಾಘಟ್‌ಬಂಧನ್‌: 88-103
ಇತರ: 3-6

ಪೋಲ್ ಆಫ್ ಫೋಲ್
ಎನ್‌ಡಿಎ: 138-155
ಮಹಾಘಟನಬಂಧನ: 82-98
ಇತರರು: 0-02

error: Content is protected !!