September 21, 2026
Monday, September 21, 2026
spot_img

ಇಂಡಿಗೋ, ಏರ್ ಇಂಡಿಯಾ ಬಳಿಕ ಆಕಾಶ ಏರ್​ಲೈನ್ಸ್ ಸರದಿ: ನಾಳೆಯಿಂದ ವಿಮಾನ ಪ್ರಯಾಣ ದುಬಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಯುದ್ಧದ ಕಾರ್ಮೋಡದಿಂದಾಗಿ ಇಂಡಿಗೋ , ಏರ್ ಇಂಡಿಯಾ ವಿಮಾನ ಸಂಸ್ಥೆಗಳು ಈಗಾಗಲೇ ವಿಮಾನ ಟಿಕೆಟ್‌ಗಳ ಮೇಲೆ ಇಂಧನ ಸರ್‌ಚಾರ್ಜ್‌ ವಿಧಿಸಿದ್ದು, ಇದೀಗ ಆಕಾಶ ವಿಮಾನಯಾನವು ಕೂಡ ಮಾರ್ಚ್ 15 ರಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್‌ಗಳ ಮೇಲೆ 199 ರೂ.ಗಳಿಂದ 1,300 ರೂ.ಗಳವರೆಗಿನ ಇಂಧನ ಸರ್‌ಚಾರ್ಜ್‌ಗಳನ್ನು ಜಾರಿಗೆ ತರಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಂಸ್ಥೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ವಿಮಾನಯಾನ ಟರ್ಬೈನ್ ಇಂಧನ ಬೆಲೆಗಳಲ್ಲಿನ ಗಮನಾರ್ಹ ಏರಿಕೆಯಾಗಿದ್ದು, ಈ ಹಿನ್ನೆಲೆ ಆಕಾಶ ಏರ್ ತನ್ನ ಎಲ್ಲಾ ಬುಕಿಂಗ್‌ಗಳಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ 199 ರೂ. ನಿಂದ 1300 ರೂ. ವರೆಗೆ ಇಂಧನ ಸರ್‌ಚಾರ್ಜ್ ಅನ್ನು ಹಾಕಲು ಮುಂದಾಗಿದೆ. ಈ ಆದೇಶವು ಮಾರ್ಚ್ 15, ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ವಿವರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !