ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಸ್ಲಾಮಾಬಾದ್ ನ್ಯಾಯಾಲಯದ ಹೊರಗೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ಆರೋಪಿಸಿದ್ದಾರೆ.
ಪಾಕಿಸ್ತಾನದಲ್ಲಿ ಅಸ್ಥಿರತೆ ಮೂಡಿಸಲು, ಅಭದ್ರತೆ ಸೃಷ್ಟಿಸಲು ಭಾರತ ಪ್ರಯತ್ನಿಸುತ್ತಿದೆ. ಇದರ ಪರಿಣಾಮ ಬಾಂಬ್ ಸ್ಫೋಟಗೊಂಡಿದೆ. ಆಫ್ಘಾನಿಸ್ತಾನವನ್ನು ಬಳಸಿಕೊಂಡು ಭಾರತ ಈ ಕೃತ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಆದ್ರೆ ಇತ್ತ ಇಸ್ಲಾಮಾಬಾದ್ ಬಾಂಬ್ ಸ್ಫೋಟದ ಹೊಣೆಯನ್ನು ತೆಹ್ರಿಕ್ ಇ ತಾಲೀಬಾನ್ ಪಾಕಿಸ್ತಾನ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಟಿಟಿಪಿ ಹೊಣೆ ಹೊತ್ತ ಬೆನ್ನಲ್ಲೇ ಶೆಹಬಾಜ್ ಷರೀಪ್ ಈ ಆರೋಪ ಮಾಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಬಾಂಬ್ ಸ್ಫೋಟದ ಹೊಣೆಯನ್ನು ಪಾಕಿಸ್ತಾನದಲ್ಲಿರುವ ತೆಹ್ರಿಕ್ ಇ ತಾಲೀಬಾನ್ ಹೊತ್ತುಕೊಂಡಿದೆ. ಆಫ್ಘಾನಿಸ್ತಾನದ ತಾಲೀಬಾನ್ ಹಾಗೂ ಪಾಕಿಸ್ತಾನದಲ್ಲಿರುವ ತಾಲೀಬಾನ್ ಸತತವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿದೆ. ಉಭಯ ದೇಶಗಳು ಸಣ್ಣ ಪ್ರಮಾಣದ ಯುದ್ಧವನ್ನೂ ಮುಗಿಸಿದೆ. ಆದರೆ ಪಾಕಿಸ್ತಾನ ಮಾತ್ರ ಭಾರತದತ್ತ ಬೊಟ್ಟು ಮಾಡುತ್ತಿದೆ. ಯಾವುದೇ ಆಧಾರವಿಲ್ಲದೆ ಭಾರತದ ಹೆಸರು ಎಳೆದು ತಂದಿದೆ.
ಇಸ್ಲಾಮಾಬಾದ್ ನ ಕೋರ್ಟ್ ಕಟ್ಟಡದ ಹೊರಗಡೆ ಸೋಮವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದು, ದಾಳಿಯಲ್ಲಿ ಇತರ 27 ಮಂದಿ ಗಾಯಗೊಂಡಿದ್ದಾರೆ.

