September 27, 2026
Sunday, September 27, 2026
spot_img

ಇರಾನ್‌-ಇಸ್ರೇಲ್‌ ಸಂಘರ್ಷ | ದುಬೈಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ವಾಪಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌-ಇಸ್ರೇಲ್‌ ಯುದ್ಧದಿಂದಾಗಿ ಮತ್ತೆ ದುಬೈ ವಾಯು ಪ್ರದೇಶವನ್ನು ಬಂದ್‌ ಮಾಡಲಾಗಿದೆ. ಈ ಕಾರಣದಿಂದ ಬೆಂಗಳೂರಿಂದ ದುಬೈಗೆ ಹೊರಟಿದ್ದ ವಿಮಾನ ವಾಪಾಸ್‌ ಬೆಂಗಳೂರಿಗೆ ಬಂದಿದೆ.

ಬೆಂಗಳೂರು ಏರ್‌ಪೋರ್ಟ್‌ನಿಂದ ದುಬೈಗೆ 113 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನ ಬೆಳಗ್ಗೆ 04:30ಕ್ಕೆ ಟೇಕಾಫ್‌ ಆಗಿತ್ತು. ಭಾರತ ಗಡಿ ದಾಟುವ ಮುನ್ನವೇ ದುಬೈನ ವಾಯು ಪ್ರದೇಶವನ್ನು ಬಂದ್‌ ಮಾಡಲಾಗಿದೆ.

ಮೆಸೇಜ್‌ ಸಿಕ್ಕ ತಕ್ಷಣವೇ ಪೈಲಟ್‌ ಹೋದ ಮಾರ್ಗದಲ್ಲೇ ವಾಪಾಸ್‌ ಬೆಂಗಳೂರಲ್ಲೇ ಬಂದಿಳಿದಿದೆ. ದುಬೈಗೆ ಹೊರಟಿದ್ದ ಜನ ವಾಯು ಪ್ರದೇಶ ಮತ್ತೆ ತೆರೆಯುವ ಸಮಯಕ್ಕಾಗಿ ಕಾದು ಕುಳಿತಿದ್ದಾರೆ. ಯುದ್ಧದಿಂದಾಗಿ ಇಂದು ಬೆಂಗಳೂರು ಏರ್‌ಪೋರ್ಟ್‌ನಿಂದ 42 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಆಗಮಿಸಬೇಕಾದ 21 ಮತ್ತು ನಿರ್ಗಮಿಸಬೇಕಾದ 21 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.

Must Read