ಕೆಲಸದ ಜಾಗ ಹೇಳಿ ಮಾಡಿಸಿದ ಸ್ಥಳವೇನಲ್ಲ. ಕೆಲವರು ಇಷ್ಟಪಟ್ಟು ಕೆಲಸ ಮಾಡುತ್ತಿದ್ದರೆ ಕೆಲವರು ಸಂಬಳಕ್ಕೆ ಕೆಲಸ ಮಾಡ್ತಾರೆ. ಕೆಲಸದ ಸ್ಥಳದಲ್ಲಿ ಸಿಟ್ಟು ಬರುವಂಥ ಸನ್ನಿವೇಶಗಳು ಹೆಚ್ಚಾಗಿಯೇ ಇರುತ್ತವೆ. ಆದರೆ ತಾಳ್ಮೆ ಕಳೆದುಕೊಂಡರೆ ಕೆಲಸಕ್ಕೆ ಕುತ್ತು ಬರಬಹುದು, ಅಥವಾ ನಿಮ್ಮ ಬೋನಸ್, ಹೈಕ್‌ಗೆ ಮುಳುವಾಗಬಹುದು. ಕೆಲಸದ ವೇಳೆ ಕೋಪ ಹೀಗೆ ಕಂಟ್ರೋಲ್ ಮಾಡಿ..
ಕೆಲಸದ ಸಮಯದಲ್ಲಿ ನನಗೆ ಸಿಟ್ಟು ಬರ್ತಿದೆ ಅನ್ನೋದು ಮಾಮೂಲಿ, ಸಿಟ್ಟು ಬರೋದು ಮನುಷ್ಯನಿಗೆ ಕಾಮನ್ ಇದನ್ನು ಅರ್ಥ ಮಾಡಿಕೊಳ್ಳಿ.
ಸಿಟ್ಟಲ್ಲಿದ್ದಾಗ ಮಾತಿನ ಮೇಲೆ ಹಿಡಿತ ಇರಲಿ, ಏನು ಹೇಳುತ್ತಿದ್ದೇನೆ ಎನ್ನುವ ಪ್ರಜ್ಞೆಯೂ ಇಲ್ಲ ಎಂದಾರೆ ಒನ್ ಮೊಮೆಂಟ್ ಎಂದು ಪೊಲೈಟ್ ಆಗಿ ಹೇಳಿ ಜಾಗ ಖಾಲಿ ಮಾಡಿ.
ಸಿಟ್ಟಿನ ಸಮಯದಲ್ಲಿ ಯಾವುದೇ ಕೆಲಸ ಮಾಡದೇ ಯಾವುದಾದರೂ ವ್ಯಾಯಾಮ ಅಥವಾ ವಾಕಿಂಗ್ ಹೋಗಿ. ಐದು ನಿಮಿಷದಲ್ಲಿ ನಿಮ್ಮ ಹಿಡಿತಕ್ಕೆ ನಿಮ್ಮ ಲೈಫ್ ಸಿಗುತ್ತದೆ.
ಯಾವ ವಿಷಯದಿಂದ ಟ್ರಿಗರ್ ಆಗ್ತಿದೆ, ಯಾವ ವ್ಯಕ್ತಿ ಟ್ರಿಗರ್ ಮಾಡ್ತಿದ್ದಾರೆ. ಅವರಿಂದ ದೂರ ಇರಿ. ದೂರ ಇರಲು ಆಗದೇ ಹೋದರೆ ಎಚ್‌ಆರ್ ಬಳಿ ಒಮ್ಮೆ ಮಾತನಾಡಿ.
ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡಿ, ನಾನು ಸಿಟ್ಟಲ್ಲಿ ಹೇಳಬೇಕಾದ್ದನ್ನು ಹೇಳಿದಾರೆ ಅರ್ಧ ಗಂಟೆಯ ನಂತರ ಅದರ ಪರಿಣಾಮ ಏನಾಗಬಹುದು. ಆಲೋಚಿಸಿ.

