ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಸ್ವಯಂಚಾಲಿತವಾಗಿ ಅಥವಾ ಆಹಾರ ಬಿಲ್ಗಳಲ್ಲಿ ಪೂರ್ವನಿಯೋಜಿತವಾಗಿ ಸೇವಾ ಶುಲ್ಕವನ್ನು ವಿಧಿಸುವುದನ್ನು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಸೋಮವಾರ ನಿಷೇಧಿಸಿದೆ.
ಇಂದು ವೇಳೆ ಈ ನಿಯಮ ಉಲ್ಲಂಘನೆಗೊಂಡರೆ ಗ್ರಾಹಕರು ಸಿಸಿಪಿಎಗೆ ದೂರುಗಳನ್ನು ಸಲ್ಲಿಸಲು ಅವಕಾಶವಿದೆ.
ಸೇವಾ ಶುಲ್ಕವು ಗ್ರಾಹಕರ ವಿವೇಚನೆಗೆ ಅನುಗುಣವಾಗಿ ಸ್ವಯಂಪ್ರೇರಿತ ಆಯ್ಕೆಯಾಗಿದೆ. ಎಡಿಎ ಕಾರಣ ಸೇವಾ ಶುಲ್ಕವನ್ನು ವಿಧಿಸುವ ಸಂಬಂಧ ಅನುಚಿತ ವ್ಯಾಪಾರ ಪದ್ಧತಿಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಸಿಸಿಪಿಎ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಾರ್ಗಸೂಚಿಗಳ ಪ್ರಕಾರ, ಯಾವುದೇ ಹೋಟೆಲ್ಗಳು ಅಥವಾ ರೆಸ್ಟೋರೆಂಟ್ಗಳು ಸ್ವಯಂಚಾಲಿತವಾಗಿ ಅಥವಾ ಪೂರ್ವನಿಯೋಜಿತವಾಗಿ ಬಿಲ್ನಲ್ಲಿ ಸೇವಾ ಶುಲ್ಕವನ್ನ ಸೇರಿಸಬಾರದು. ಬೇರೆ ಯಾವುದೇ ಹೆಸರಿನಿಂದ ಸೇವಾ ಶುಲ್ಕವನ್ನು ಸಂಗ್ರಹಿಸಬಾರದು ಎಂದು ಸಿಸಿಪಿಎ ಹೇಳಿದೆ.
ಸೇವಾ ಶುಲ್ಕ ಸಂಗ್ರಹಣೆಯ ಆಧಾರದ ಮೇಲೆ ಪ್ರವೇಶ ಅಥವಾ ಸೇವೆಗಳನ್ನು ಒದಗಿಸುವುದರ ಮೇಲೆ ಯಾವುದೇ ನಿರ್ಬಂಧವನ್ನ ಗ್ರಾಹಕರ ಮೇಲೆ ಹೇರಲಾಗುವುದಿಲ್ಲ ಎಂದು ಹೇಳಿದೆ.
ಜೊತೆಗೆ ಆಹಾರ ಬಿಲ್ʼನೊಂದಿಗೆ ಸೇರಿಸುವ ಮೂಲಕ ಮತ್ತು ಒಟ್ಟು ಮೊತ್ತದ ಮೇಲೆ ಜಿಎಸ್ಟಿ ವಿಧಿಸುವ ಮೂಲಕ ಸೇವಾ ಶುಲ್ಕವನ್ನ ಸಂಗ್ರಹಿಸಲಾಗುವುದಿಲ್ಲ. ಒಂದು ವೇಳೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕವನ್ನು ವಿಧಿಸುತ್ತಿದೆ ಎಂದು ಯಾವುದೇ ಗ್ರಾಹಕರು ಕಂಡುಕೊಂಡರೆ ಅದನ್ನು ಬಿಲ್ ಮೊತ್ತದಿಂದ ತೆಗೆದುಹಾಕುವಂತೆ ಸಂಬಂಧಪಟ್ಟ ಸಂಸ್ಥೆಯನ್ನು ವಿನಂತಿಸಬಹುದು. ಅದಕ್ಕಾಗಿ 1915ಕ್ಕೆ ಕರೆ ಮಾಡುವ ಮೂಲಕ ಅಥವಾ ಎನ್ಸಿಎಚ್ ಮೊಬೈಲ್ ಅಪ್ಲಿಕೇಶನ್ ಮೂಲಕ, ಅವರು ಗ್ರಾಹಕ ಆಯೋಗಕ್ಕೆ ದೂರುಗಳನ್ನು ಸಲ್ಲಿಸುವ ಮೂಲಕ, ವ್ಯಾಜ್ಯಪೂರ್ವ ಮಟ್ಟದಲ್ಲಿ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH)ಗೆ ಗ್ರಾಹಕರು ದೂರು ಸಲ್ಲಿಸಬಹುದು.