ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಜಲಮೂಲಗಳು ಉಕ್ಕಿ ಹರಿಯಲಾರಂಭಿಸಿ ಹೊಸ ಆತಂಕ ಮೂಡಿಸಿವೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಕೇರಳದ ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೀವನದಿಗಳಾದ ಚಂದ್ರಗಿರಿ, ತೇಜಸ್ವಿನಿ, ಚೈತ್ರವಾಹಿನಿ, ಸೀರೆ ಮೈದುಂಬಿಕೊಂಡಿದ್ದು ಅಪಾಯದ ಮಟ್ಟದತ್ತ ಹರಿಯುತ್ತಿವೆ. ನಾಗರಿಕರು ವ್ಯಾಪಕ ಎಚ್ಚರಿಕೆಯಲ್ಲಿರುವಂತೆ ಆಡಳಿತಗಳು ಸೂಚಿಸಿವೆ. ಯಾವುದೇ ಅಪಾಯ ಸಂಭವಿಸದಂತೆ ಜಿಲ್ಲಾಡಳಿತ ಕಣ್ಗಾವಲಿರಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ