Wednesday, November 12, 2025

HEALTH | ಇದೀಗ ಮಣಿಪಾಲ್‌ ಆಸ್ಪತ್ರೆಗಳಲ್ಲಿ ಲೇಸರ್ ಆಂಜಿಯೋಪ್ಲಾಸ್ಟಿ– ಬೈಪಾಸ್ ಶಸ್ತ್ರಚಿಕಿತ್ಸೆಗೆ ಸುರಕ್ಷಿತ ಪರ್ಯಾಯ

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ ನವೀನ ಲೇಸರ್ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯನ್ನು ಪರಿಚಯಿಸಿದೆ. ಈ ಚಿಕಿತ್ಸಾ ಕ್ರಮವು ಕ್ಯಾಲ್ಸಿಯಂ ಬ್ಲಾಕ್ ಗಳಿಂದ ಗಟ್ಟಿಯಾಗಿರುವ, ಅಥವಾ ಈ ಹಿಂದೆ ಚಿಕಿತ್ಸೆ ಕಷ್ಟ ಎಂದು ಪರಿಗಣಿಸಲಾದ ಅಪಧಮನಿ (ಆರ್ಟರಿಯಲ್) ಬ್ಲಾಕೇಜ್ ಹೊಂದಿರುವ ರೋಗಿಗಳಿಗೆ ಬೈಪಾಸ್‌ ಕಾರ್ಡಿಯಾಕ್ ಶಸ್ತ್ರಚಿಕಿತ್ಸೆಗಳಿಗಿಂತಲೂ ಸುರಕ್ಷಿತ ಮತ್ತು ಕಡಿಮೆ ಆಘಾತಕಾರಿ, ಆದರೆ ಹೆಚ್ಚು ಪರಿಣಾಮಕಾರಿಯಾಗಿದೆ.

ಈ ತಂತ್ರಜ್ಞಾನದಿಂದ ಬಹು ಸ್ಟಂಟ್‌ಗಳು, ತೀವ್ರವಾದ ಅಥೆರೋಸ್ಕ್ಲಿರೋಸಿಸ್ ಹಾಗೂ ಅತಿಸೂಕ್ಷ್ಮ ಮತ್ತು ಕಿರಿದಾದ ಅಪಧಮನಿ ಸಮಸ್ಯೆಗಳಿಗೆ ಯಾವುದೇ ರೀತಿಯ ಛೇದನವಿಲ್ಲದೆ ಚಿಕಿತ್ಸೆ ನೀಡಬಹುದಾಗಿದೆ. ಇದರಿಂದ ಸಾಂಪ್ರದಾಯಿಕ ಆಂಜಿಯೋಪ್ಲಾಸ್ಟಿ ಗೆ ಸೂಕ್ತರಲ್ಲ ಎಂದು ಹೇಳಲಾಗಿದ್ದ ರೋಗಿಗಳಿಗೆ ಹೊಸ ಆಶಾಕಿರಣ ದೊರಕಿದೆ ಎಂದು ಇಂಟರ್ವೆನ್ಶನಲ್ ಕಾರ್ಡಿಯಾಲಜಿಯ HOD ಮತ್ತು ಕನ್ಸಲ್ಟಂಟ್ ಡಾ. ಕೇಶವ ಆರ್ ಹೇಳಿದ್ದಾರೆ.

ಲೆಸರ್ ಆಂಜಿಯೋಪ್ಲಾಸ್ಟಿಯು, ನಿಯಂತ್ರಿತ ಬೆಳಕಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದು ಗಟ್ಟಿಯಾಗಿರುವ ಅಥವಾ ಕ್ಯಾಲ್ಸಿಫೈಡ್ ಡೆಪಾಸಿಟ್‌ಗಳನ್ನು ವೇಪರೈಸ್ (ಆವೀಕರಣಗೊಳಿಸಿ) ಅಪಧಮನಿಯನ್ನು ಅತೀ ನಿಖರವಾಗಿ ಸ್ವಚ್ಛ ಮಾಡುತ್ತದೆ. ಇದರಿಂದ ಅಪಧಮನಿ ಗೋಡೆಗಳ ಮೇಲೆ ಒತ್ತಡ ಕಡಿಮೆಯಾಗಿ, ಅವುಗಳಿಗೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸರಾಗವಾದ ರಕ್ತಪ್ರವಾಹವನ್ನು ಅಣಿಯಾಗಿಸುತ್ತದೆ. ಮೇಲಾಗಿ, ರೋಗಿಯ ಇದಲ್ಲದೆ, ಇದು ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಆಸ್ಪತ್ರೆಯ ವಾಸದ ಅವಧಿಯನ್ನು ಕೂಡ ಗಣನೀಯವಾಗಿ ಕಡಿಮೆಯಾಗಿಸುತ್ತದೆ.

ನಮ್ಮ ಇಂಟರ್ವೆನ್ಶನಲ್ ಕಾರ್ಡಿಯಾಲಜಿ ಸಾಮರ್ಥ್ಯಕ್ಕೆ ಈ ಹೊಸ ಸಾಧನ ಸೇರ್ಪಡೆ ಆಗಿರುವುದರಿಂದ, ದೊಡ್ಡ ಶಸ್ತ್ರಚಿಕಿತ್ಸೆ ಬೇಕಾಗುತ್ತಿದ್ದ ಕ್ಲಿಷ್ಟಕರ ಹೃದಯ ಸಮಸ್ಯೆಗಳಿರುವ ರೋಗಿಗಳಿಗೆ ಇದು ವಿಶೇಷ ಪ್ರಯೋಜನಕಾರಿಯಾಗಿದೆ ಎಂದು ಡಾ. ಎಚ್. ಸುದರ್ಶನ್ ಬಲ್ಲಾಳ್, ಚೇರ್ಮನ್, ಮಣಿಪಾಲ್ ಆಸ್ಪತ್ರೆಗಳು, ಅವರು ಹೇಳಿದ್ದಾರೆ.

ಲೆಸರ್ ಆಂಜಿಯೋಪ್ಲಾಸ್ಟಿ ಒಂದು ವೈದ್ಯಕೀಯ ವರದಾನವಾಗಿದ್ದು, ಇದು ಅತ್ಯಾಧುನಿಕ, ಕಡಿಮೆ ಆಘಾತಕಾರಿ ಚಿಕಿತ್ಸಾ ವಿಧಾನವಾಗಿದ್ದು ಉತ್ತಮ ಫಲಿತಾಂಶಗಳು ಮತ್ತು ವೇಗವಾದ ಚೇತರಿಕೆಯನ್ನು ನೀಡಲು ಸಹಾಯ ಮಾಡುತ್ತದೆ.
ಇಂತಹ ಅತ್ಯಾಧುನಿಕ ಹೃದಯ ಚಿಕಿತ್ಸೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ದೀರ್ಘಕಾಲದ ಹೃದಯ ಆರೋಗ್ಯಕ್ಕಾಗಿ ಸುರಕ್ಷಿತ, ಪರಿಣಾಮಕಾರಿ ಮತ್ತು ರೋಗಿ ಸ್ನೇಹಿ ಚಿಕಿತ್ಸೆಗಳತ್ತ ಮಣಿಪಾಲ್ ಆಸ್ಪತ್ರೆ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ.

error: Content is protected !!