ಹೊಸದಿಗಂತ ವರದಿ ಯಾದಗಿರಿ:
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಇಲ್ಲಿನ ಸಮಾಜಕಲ್ಯಾಣ ಇಲಾಖೆಯಲ್ಲಿ ಎಸ್ ಡಿಎ ಸಿಬ್ಬಂದಿ ಅಂಜಲಿ ಕಂಬಾನೂರ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆನಡೆಸಿದ ಘಟನೆ ಬುಧವಾರ ನಡೆದಿದೆ.
ಅಂಜಲಿಅವರು ಎಂದಿನಂತೆ ಕರ್ತವ್ಯಕ್ಕಾಗಿ ಕಚೇರಿಗೆ ಕಾರಿನಲ್ಲಿ ಆಗಮಿಸುವ ವೇಳೆ ದುಷ್ಕರ್ಮಿಗಳು ಅವರನ್ನು ಬೆನ್ನಟ್ಟಿ ಬಂದು ನಗರದ ಚಿತ್ತಾಪುರ ರಸ್ತೆಯಲ್ಲಿ ಹರಿತವಾದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಘಟನೆ ನಡೆದ ತಕ್ಷಣವೇ ಕಾರ್ ಚಾಲಕ ಅಜೀಮಿರ್, ದಾಳಿ ಲೆಕ್ಕಿಸದೇ ಗಾಯಾಳು ಅಂಜಲಿ ಅವರನ್ನು ಯಿಮ್ಸ್ ಆಸ್ಪತ್ರೆಗೆ ಸೇರಿಸಿದಾಗ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲಾಗಿದೆ. ಸ್ಥಿತಿಯಂತು ಗಂಭಿರವಾಗಿದೆ.
ಹಳೆ ವೈಷ್ಯಮ್ಮವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್ ಪಿ ಪ್ರಥ್ವಿಕ್ ಶಂಕರ್ ಭೇಟಿ ನೀಡಿದ್ದಾರೆ.

