ಆಲೂಗಡ್ಡೆ ಎಲ್ಲರಿಗೂ ಇಷ್ಟವಾಗುವ ತರಕಾರಿ. ಇದನ್ನು ಹಲವಾರು ರೀತಿಯಲ್ಲಿ ಉಪಯೋಗಿಸಬಹುದು. ಕರಿ, ಚಪಾತಿ ಪಲ್ಯ, ಸ್ಯಾಂಡ್‌ವಿಚ್ ಅಥವಾ ಬಿರಿಯಾನಿ. ಆದರೆ ಇವತ್ತು ನಾವು “ಆಲೂ ರೈಸ್ ಬಾತ್” ಮಾಡುವುದನ್ನು ಕಲಿಯೋಣ. ಇದು ಬೆಳಗಿನ ಉಪಾಹಾರಕ್ಕಾಗಲಿ ಅಥವಾ ಮಧ್ಯಾಹ್ನದ ಊಟಕ್ಕಾಗಲಿ ಬೆಸ್ಟ್, ಸುಲಭವಾಗಿ ತಯಾರಿಸಬಹುದಾದ ಸ್ವಾದಿಷ್ಟವಾದ ರೈಸ್ ಡಿಶ್ ಇದು.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – 1 ಕಪ್
ಆಲೂಗಡ್ಡೆ – 2 ಮಧ್ಯಮ ಗಾತ್ರ
ಈರುಳ್ಳಿ – 1
ಟೊಮ್ಯಾಟೋ – 1 (ಐಚ್ಛಿಕ)
ಹಸಿಮೆಣಸು – 2 (ಉದ್ದವಾಗಿ ಕತ್ತರಿಸಿ)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಕರಿಬೇವು ಎಲೆ – ಸ್ವಲ್ಪ
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಅರಿಶಿಣ – ¼ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – ½ ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ ಅಥವಾ ತುಪ್ಪ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ನೀರು – 2 ಕಪ್
ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ಅರ್ಧ ಬೇಯಿಸಿ ಅಣ್ಣ ಮಾಡಿಟ್ಟುಕೊಂಡು ತಂಪಾಗಲು ಬಿಡಿ.
ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಈರುಳ್ಳಿ, ಹಸಿಮೆಣಸು, ಕರಿಬೇವು ಸೇರಿಸಿ ಬಾಡಿಸಿ.
ಈಗ ಕತ್ತರಿಸಿದ ಆಲೂ ತುಂಡುಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ 5–7 ನಿಮಿಷ ಹುರಿಯಿರಿ. ಬಂಗಾರ ಬಣ್ಣ ಬಂದಾಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ಅದಕ್ಕೆ ಟೊಮ್ಯಾಟೋ, ಅರಿಶಿಣ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 2 ನಿಮಿಷ ಬೇಯಿಸಿ. ಈಗ ಬೇಯಿಸಿದ ಅನ್ನವನ್ನು ಸೇರಿಸಿ ಮಿಕ್ಸ್ ಮಾಡಿ. ಉರಿಯನ್ನು ಕಡಿಮೆ ಮಾಡಿ ಮುಚ್ಚಿ 5 ನಿಮಿಷ ಬೇಯಿಸಿ.

