ಮೇಷ.
ಎಲ್ಲ ವಿಚಾರದಲ್ಲೂ ನೀವಿಂದು ಹೆಚ್ಚಿನ ಗಮನ ನೀಡಬೇಕು. ವಾಗ್ವಾದ ನಡೆದೀತು. ಕೋಪ ನಿಯಂತ್ರಿಸಿ. ಅನಿಯಂತ್ರಿತ ವೆಚ್ಚವೂ ಹೆಚ್ಚಲಿದೆ.
ವೃಷಭ
ಎಂದಿಗಿಂತ ಹೆಚ್ಚು ಕೆಲಸದ ಒತ್ತಡ. ಏಕಾಗ್ರತೆ ಕಳಕೊಳ್ಳದಿರಿ. ಸಂಬಂಧದಲ್ಲಿ ಅಸಂತೃಪ್ತಿ. ಮನಸ್ಸು ನಿರಾಳಗೊಳಿಸಲು ಪ್ರಯತ್ನಿಸಿ. ಧನವ್ಯಯ.
ಮಿಥುನ
ಕೆಲಸ ಸುಗಮವಾಗಿ ಸಾಗಲಿದೆ. ವ್ಯವಹಾರದಲ್ಲಿ ಪ್ರಗತಿ. ಪ್ರೀತಿಯಲ್ಲಿ ಯಶ. ಆರ್ಥಿಕ ವಿಚಾರದಲ್ಲಿ ಅತೃಪ್ತಿ ತ್ಯಜಿಸಿ. ಇದ್ದುದರಲ್ಲಿ ತೃಪ್ತಿ ಪಡಿ.
ಕಟಕ
ಮನೆಯಲ್ಲಿ ಹೊಂದಾಣಿಕೆ ಕೊರತೆ. ಸಂಘರ್ಷ ನಡೆದೀತು. ಆದಾಯ ಸೀಮಿತ. ದೊಡ್ಡ ಸಮಸ್ಯೆ ಎದುರಾದೀತು. ಎದುರಿಸಲು ಸಜ್ಜಾಗಿ.
ಸಿಂಹ
ಕೆಲವಾರು ವಿಷಯ ಏಕಕಾಲದಲ್ಲಿ ಇತ್ಯರ್ಥ ಮಾಡಬೇಕಾಗುವುದು. ಸಮಾಧಾನದಿಂದ ಚಿಂತಿಸಿ. ಖರ್ಚು ಹೆಚ್ಚಳ. ಕಾಲು ನೋವು ಬಾಧಿಸಬಹುದು.
ಕನ್ಯಾ
ಉತ್ಸಾಹದ ದಿನ. ಕುಟುಂಬ ಮತ್ತು ಸ್ನೇಹಿತರ ಜತೆ ಕಾಲಕ್ಷೇಪ. ವ್ಯವಹಾರದಲ್ಲಿ ಬಿಕ್ಕಟ್ಟು ಮೂಡದಂತೆ ದಾಖಲೆ ರೆಡಿಯಾಗಿಟ್ಟುಕೊಳ್ಳಿ.
ತುಲಾ
ಕಾಲಮಿತಿಯಲ್ಲಿ ನಿಮ್ಮ ಕಾರ್ಯ ಪೂರೈಸುವಿರಿ. ಆದಾಯ ಹೆಚ್ಚಳದ ಮಾರ್ಗ ತೆರೆಯಲಿದೆ. ಪ್ರೀತಿಯ ವಿಚಾರದಲ್ಲಿ ಮೂಡಿದ್ದ ಬಿಕ್ಕಟ್ಟು ಪರಿಹಾರ ಸಂಭವ.
ವೃಶ್ಚಿಕ
ನಿಧಾನಗತಿಯಲ್ಲಿ ಕೆಲಸ ನಡೆದೀತು. ಧಾವಂತ ತೋರದಿರಿ. ಅನಿರೀಕ್ಷಿತ ಖರ್ಚು ಬರಲಿದೆ. ಕೆಲವರಿಗೆ ಅಜೀರ್ಣ ಸಮಸ್ಯೆ ಕಾಡಬಹುದು.
ಧನು
ಕಾರ್ಯದಕ್ಷತೆಗೆ ಮೆಚ್ಚುಗೆ ಪಡೆಯುವಿರಿ. ಆತ್ಮೀಯರ ಜತೆ ಸಂವಹನದಲ್ಲಿ ಸಮಸ್ಯೆ. ತಪ್ಪು ಕಲ್ಪನೆ ಮೂಡದಂತೆ ಎಚ್ಚರ ವಹಿಸಿ.
ಮಕರ
ನಿಮ್ಮ ಸ್ಪಷ್ಟ ಚಿಂತನೆ ವ್ಯವಹಾರ ಸುಲಭ ಮಾಡಲಿದೆ. ಹೆಚ್ಚಿದ ಖರ್ಚು ಚಿಂತೆ ತಂದೀತು. ದೈಹಿಕ ಅನಾರೋಗ್ಯ ಕಾಡಬಹುದು.
ಕುಂಭ
ಸವಾಲನ್ನು ದಿಟ್ಟವಾಗಿ ಎದುರಿಸಿ. ಯಶಸ್ಸು ನಿಮ್ಮದೆ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಹಣದ ಹರಿವು ಅಬಾಽತ. ಬಂಧುಗಳ ಸಹಕಾರ.
ಮೀನ
ಕೆಲಸದ ಒತ್ತಡ ಕಡಿಮೆಯಾಗಲಿದೆ. ಮನೆಯಲ್ಲಿ ನೆಮ್ಮದಿ ಕಾಪಾಡಲು ಹೊಂದಾಣಿಕೆ ಮಾರ್ಗ ಅನುಸರಿಸಿ. ನಿಮ್ಮ ನಿಲುವಿಗೆ ಅಂಟಿಕೊಳ್ಳದಿರಿ.
ದಿನಭವಿಷ್ಯ: ಇಂದು ಕೆಲಸ ಸುಗಮವಾಗಿ ಸಾಗಲಿದೆ, ವ್ಯವಹಾರದಲ್ಲಿ ಪ್ರಗತಿ

