ದಿನಭವಿಷ್ಯ: ಎಚ್ಚರದಿಂದ ಕೆಲಸ ಮಾಡಿ, ನಿಮ್ಮ‌ ಕೆಲಸ ಕೆಡಿಸಲು ಕೆಟ್ಟ ಕಣ್ಣುಗಳಿವೆ!

ಮೇಷ
ವೃತ್ತಿಕ್ಷೇತ್ರ ಮತ್ತು ಖಾಸಗಿ ಬದುಕಿನಲ್ಲಿ ಕೆಲವು ಸವಾಲು, ಸಮಸ್ಯೆ ಎದುರಿಸುವಿರಿ. ಇದನ್ನು ಕೌಶಲದಿಂದ ನಿವಾರಿಸಬೇಕು. ದುಡುಕು ಸಲ್ಲದು.

ವೃಷಭ
ಕೆಲಸದ ಒತ್ತಡದಿಂದಾಗಿ  ನಿಮ್ಮಿಂದ ಕೆಲವು ತಪ್ಪುಗಳು ಉಂಟಾಗ ಬಹುದು. ಸಂಗಾತಿ ಜತೆಗೆ ವೈಮನಸ್ಯ ಉಂಟಾದೀತು. ಸಹನೆ ಕಾಯ್ದುಕೊಳ್ಳಿ.

ಮಿಥುನ
ಕಾರ್ಯದೊತ್ತಡ ಇದ್ದರೂ ಸಮಾಧಾನ ದಿಂದ ಕೆಲಸ ನಿರ್ವಹಿಸಿ. ಅದರಿಂದ ನಿಮ್ಮ ಆರೋಗ್ಯಕ್ಕೂ ಹಿತಕರ. ಕೌಟುಂಬಿಕ ಭಿನ್ನಾಭಿಪ್ರಾಯ.

ಕಟಕ
ಶ್ರದ್ಧೆಯಿಂದ ಕಾರ್ಯ ಎಸಗಿದರೆ ಇಂದು ನೀವು ಅತ್ಯುತ್ತಮ ಫಲ ಪಡೆಯುವಿರಿ. ಉದಾಸೀನತೆ ತೊಡೆಯಬೇಕು. ಕೌಟುಂಬಿಕ ಶಾಂತಿ.

ಸಿಂಹ
ಇಂದು ಪ್ರಮುಖ ನಿರ್ಧಾರ ತಾಳಬೇಡಿ. ಅದು ನಿಮಗೆ ಪ್ರತಿಕೂಲ ಆದೀತು. ಧನ ಲಾಭವಿದೆ. ಅಷ್ಟೇ ವೇಗದಲ್ಲಿ  ಖರ್ಚೂ ಆಗಲಿದೆ.

ಕನ್ಯಾ
ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಹಣದ ಹರಿವು ಹೆಚ್ಚಲಿದೆ. ಆದರೆ ಕೌಟುಂಬಿಕವಾಗಿ ಕೆಲವು ಉದ್ವಿಗ್ನದ ಸ್ಥಿತಿ ನಿರ್ಮಾಣವಾದೀತು.

ತುಲಾ
ನಿಮ್ಮ ಕೆಲಸದಲ್ಲಿ ಸಂತೋಷ ಕಾಣುವವರು ನೀವು. ಆದರೆ  ಕೌಟುಂಬಿಕ ಚಿಂತೆಯೊಂದು ಕಾಡಬಹುದು. ಅದಕ್ಕೆ ಪರಿಹಾರ ಕಷ್ಟ.

ವೃಶ್ಚಿಕ
ಕೆಲಸದಲ್ಲಿ ತಪ್ಪುಗಳಾಗ ಬಹುದು. ಹಾಗಾಗಿ ಎಚ್ಚರದಿಂದ ನಿರ್ವಹಿಸಿ. ಸಾಲ ಪಡೆದಿದ್ದರೆ ಅದನ್ನು ತೀರಿಸುವ ಕಾಲ ಬಂದಿದೆ. ಧನಲಾಭ ಆಗಲಿದೆ. ಸಂತಸ.

ಧನು
ಎಚ್ಚರದಿಂದ ಕಾರ್ಯ ನಿರ್ವಹಿಸಿ. ಕೆಲವರು ನಿಮ್ಮ ಕಾರ್ಯಕ್ಕೆ ಅಡ್ಡಿ ತರಲು ಯತ್ನಿಸುತ್ತಾರೆ. ಸಂಬಂಧವನ್ನು ಸೌಹಾರ್ದದಲ್ಲಿ ಇರಿಸಿಕೊಳ್ಳಿ.

ಮಕರ
ನಿಮ್ಮ ಕುರಿತಂತೆ ಕೆಲವರು ಟೀಕಿಸ ಬಹುದು. ಎಲ್ಲರನ್ನು ಮೆಚ್ಚಿಸುವುದು ಕಷ್ಟ. ನಿಮ್ಮ ದಾರಿ ಸರಿಯಾಗಿದ್ದರೆ ತಲೆ ಕೆಡಿಸಿಕೊಳ್ಳದಿರಿ.

ಕುಂಭ
ನೆಗೆಟಿವ್ ಆಲೋಚನೆ ಗಳು ಮನಸ್ಸು ಕೆಡಿಸಬಹುದು. ಆತ್ಮೀಯರೊಂದಿಗೆ ಭಾವನೆ ಹಂಚಿಕೊಳ್ಳಿ. ಅದರಿಂದ ಮನಸ್ಸು ನಿರಾಳವಾಗುವುದು.

ಮೀನ
ಆಪ್ತ ಮಿತ್ರ
ರೊಂದಿಗೆ ಸಂವಹನದ ಕೊರತೆ. ಅದರಿಂದ ಸಂಬಂಧದಲ್ಲಿ ಬಿರುಕು. ಆರ್ಥಿಕ ಪ್ರಗತಿ ನಿರೀಕ್ಷಿಸಿದಂತೆ ಆಗದು. ತಾಳ್ಮೆಯಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!