ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ದೇಶದ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಿದೆ ಎಂದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಆಪಾದನೆಗೆ ಸ್ವತಃ ಲಾಂಛನವನ್ನು ನಿರ್ಮಾಣ ಮಾಡಿದ ಕಲಾವಿದ ಸುನೀಲ್ ದಿಯೋರ್ ಸ್ಪಷ್ಟನೆ ನೀಡಿದ್ದಾರೆ.
ಹೊಸ ಸಂಸತ್ ಭವನದ ಮೇಲಿರುವ ಲಾಂಛನವನ್ನು ನಿರ್ಮಾಣ ಮಾಡಿದ ಕಲಾವಿದ ಸುನೀಲ್ ದಿಯೋರ್ ಮಾತನಾಡಿದ್ದು, ಸಾರಾನಾಥದ ಸ್ತಂಭದ ರೀತಿಯಲ್ಲಿಯೇ ಇದನ್ನು ಚಿತ್ರಿಸಲಾಗಿದೆ. 9 ತಿಂಗಳ ಕಾಲ ಶ್ರಮವಹಿಸಿ ಇದರ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಸಾರಾನಾಥದಲ್ಲಿರುವ ಸ್ತಂಭದ ಸಿಂಹಗಳನ್ನೇ ಇಲ್ಲಿ ಚಿತ್ರಿಸಲಾಗಿದೆ ಎಂದಿದ್ದಾರೆ.
ಈ ಮೂಲಕ ವಿಪಕ್ಷಗಳ ವಿರೋಧಕ್ಕೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.