Thursday, November 13, 2025

ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್: ನಾಚಿ ನೀರಾದ್ಲು ಕೊಡಗಿನ ಕುವರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಜೋಡಿ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂಬ ಮಾತುಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಬಹು ದಿನಗಳಿಂದ ರಿಲೇಶನ್‌ಶಿಪ್ ಬಗ್ಗೆ ಮೌನವಾಗಿದ್ದ ಈ ಜೋಡಿ ಈಗ ತಮ್ಮ ಪ್ರೀತಿಯ ಕ್ಷಣವನ್ನು ಎಲ್ಲರ ಮುಂದೆಯೇ ಹಂಚಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ದಿ ಗರ್ಲ್‌ಫ್ರೆಂಡ್ ಚಿತ್ರದ ಸಕ್ಸಸ್ ಸೆಲೆಬ್ರೇಶನ್‌ನಲ್ಲಿ ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಅವರಿಗೆ ಸಿಹಿ ಮುತ್ತು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ರಶ್ಮಿಕಾ ಅಭಿನಯದ ಈ ಸಿನಿಮಾ ಯಶಸ್ಸಿನ ಸಂಭ್ರಮದ ವೇಳೆ ವಿಜಯ್ ವೇದಿಕೆಗೆ ಹತ್ತಿ, ರಶ್ಮಿಕಾಳ ಕೈ ಹಿಡಿದು ಸಿಹಿ ಮುತ್ತು ನೀಡಿದರು. ರಶ್ಮಿಕಾ ಮಂದಣ್ಣ ನಾಚಿಕೆಯಿಂದ ನೀರಾದರೆ, ವಿಜಯ್ ದೇವರಕೊಂಡದ ಮುಖದಲ್ಲಿ ಪ್ರೀತಿಯ ನಗು ಕಾಣಿಸಿತು.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು “ಇವರಿಬ್ಬರ ಪ್ರೀತಿ ಈಗ ಅಧಿಕೃತವಾಗಿದೆ”, “ಕ್ಯೂಟ್ ಜೋಡಿ”, “ಮದುವೆಯ ದಿನಾಂಕ ಪ್ರಕಟಿಸಿ” ಎಂದು ಕಮೆಂಟ್‌ಗಳ ಸುರಿಮಳೆಯಾಗಿದೆ.

error: Content is protected !!