ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದಲ್ಲಿ ಪ್ರಯಾಣಿಸುವಾಗ ನಿಮ್ಮ ಪಕ್ಕದ ಸೀಟಲ್ಲಿ ಒಂದು ಬಾಕ್ಸ್ ‘ಕುಳಿತುಕೊಂಡಿದರೇ’ ಹೌಹಾರಬೇಡಿ…
ಅದು ಬೇರೆ ಯಾರು ಅಲ್ಲ, ದೇಶದ ಪ್ರಥಮ ಪ್ರಜೆಯನ್ನು ಆಯ್ಕೆ ಮಾಡಲಿರುವ ‘ಮಿಸ್ಟರ್ ಬ್ಯಾಲೆಟ್ ಬಾಕ್ಸ್’ .
ಹೌದು, ರಾಷ್ಟ್ರಪತಿ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದ್ದು, ಸಕಲ ಸಿದ್ದತೆಗಳು ನಡೆಯುತ್ತಿದೆ. ಇತ್ತ ವಿಮಾನಗಳಲ್ಲಿ ಬ್ಯಾಲೆಟ್ ಬಾಕ್ಸ್ ಪ್ರಯಾಣಿಕರಂತೆ ಸಂಚಾರ ಹೊರಟಿವೆ.
ಇದರಲ್ಲಿ ವಿಶೇಷ ಏನೆಂದರೆ ಇಲ್ಲಿ ‘ಬ್ಯಾಲೆಟ್ ಬಾಕ್ಸ್’ಗೆ ಪ್ರತ್ಯೇಕ ಟಿಕೆಟ್ ಅನ್ನು ಖರೀದಿಸಲಾಗುತ್ತದೆ. ವಿಮಾನದ ಮುಂಭಾಗದ ಸಾಲಿನಲ್ಲಿಕುಳಿತುಕೊಳ್ಳಲು ಸೀಟು ಅನ್ನು ನೀಡಲಾಗುತ್ತದೆ. ಇದರ ಜೊತೆಗೆ ಓರ್ವ ಅಧಿಕಾರಿ ಇರಲಿದ್ದಾರೆ. ಜೊತೆಗೆ ಮತಗಳನ್ನು ಗುರುತಿಸಲು ಮತಪತ್ರಗಳು ಮತ್ತು ವಿಶೇಷ ಪೆನ್ನುಗಳನ್ನು ಇರಿಸಲಾಗುತ್ತದೆ.
ಬಳಿಕ ಆಯಾ ಆಯಾ ರಾಜ್ಯದ ರಾಜಧಾನಿಗಳಿಗೆ ಇದು ಸಂಚಾರಿಸಲಿದೆ.
ರಾಜಧಾನಿಗಳಿಗೆ ಬಂದ ನಂತರ, ಅವುಗಳನ್ನು ಸ್ಯಾನಿಟೈಸ್ ಮಾಡಿದ ಮತ್ತು ಸರಿಯಾಗಿ ಮುಚ್ಚಿದ ಸ್ಟ್ರಾಂಗ್ ರೂಮ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಪ್ರಕ್ರಿಯೆಯನ್ನು ವೀಡಿಯೊಟೇಪ್ ಮಾಡಲಾಗುತ್ತದೆ.
ಚುನಾವಣೆಯ ನಂತರ, ಪೋಲ್ ಮಾಡಿದ ಮತಪೆಟ್ಟಿಗೆಗಳು ಮತ್ತು ಇತರ ಚುನಾವಣಾ ಸಾಮಗ್ರಿಗಳನ್ನು ಮುಂದಿನ ಲಭ್ಯವಿರುವ ವಿಮಾನದ ಮೂಲಕ ಈ ಬಾರಿ ರಾಜ್ಯಸಭಾ ಕಾರ್ಯದರ್ಶಿ-ಜನರಲ್ ಚುನಾವಣಾಧಿಕಾರಿಗಳ ಕಚೇರಿಗೆ ಸಾಗಿಸಲಾಗುತ್ತದೆ.
ಬೆಲ್ಲೆಟ್ ಬಾಕ್ಸ್ ಮತ್ತು ಚುನಾವಣಾ ಸಾಮಗ್ರಿಗಳನ್ನು ಪ್ರಯಾಣಿಕರು ಎಂದು ಗುರುತಿಸಲು ೧೯೬೯ ರಿಂದ ಚುನಾವಣಾ ಆಯೋಗವುಕ್ಕೆ ನಾಗರೀಕ ವಿಮಾನಯಾನ ಸಚಿವಾಲಯವು ವಿಶೇಷ ಅಧಿಕಾರವನ್ನು ನೀಡಿದೆ.