January15, 2026
Thursday, January 15, 2026
spot_img

World Kindness Day: ಈ ರೀತಿಯ ಒಂದು ದಿನಾನೂ ಇದೆ ಅನ್ನೋದು ನಿಮಗೆ ಗೊತ್ತಿದ್ಯಾ?

ಪ್ರತಿ ವರ್ಷ ನವೆಂಬರ್ 13 ರಂದು ವಿಶ್ವದಾದ್ಯಂತ ವಿಶ್ವ ದಯೆ ದಿನ(World Kindness Day)ವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವೆಂದರೆ ಮಾನವೀಯ ಮೌಲ್ಯಗಳು, ಸಹಾನುಭೂತಿ ಮತ್ತು ಪ್ರೀತಿ ಎಂಬ ಅಂಶಗಳನ್ನು ಜನರ ಹೃದಯಗಳಲ್ಲಿ ಪುನಃ ಜಾಗೃತಗೊಳಿಸುವುದು. ಇಂದಿನ ವೇಗದ ಯುಗದಲ್ಲಿ ಸ್ವಾರ್ಥ, ಸ್ಪರ್ಧೆ ಮತ್ತು ಒತ್ತಡದ ನಡುವೆ ದಯೆಯಂತಹ ಶುದ್ಧ ಭಾವನೆಗಳು ಮರೆಮಾಚುತ್ತಿವೆ. ಈ ಸಂದರ್ಭದಲ್ಲೇ ಈ ದಿನವು ನಮಗೆ ಪರಸ್ಪರ ಗೌರವ ಮತ್ತು ಸಹಾಯದ ಅಗತ್ಯವನ್ನು ನೆನಪಿಸುತ್ತದೆ.

ವಿಶ್ವ ದಯಾ ದಿನದ ಮೂಲವನ್ನು 1998ರಲ್ಲಿ ಜಪಾನ್‌ನಲ್ಲಿ ನಡೆದ “ವಿಶ್ವ ದಯಾ ಚಳವಳಿ” (World Kindness Movement) ಮೂಲಕ ವಿಶ್ವ ಸಾಮರಸ್ಯವನ್ನು ಬೆಳೆಸುವಲ್ಲಿ ದಯೆಯು ವಹಿಸುವ ಪ್ರಮುಖ ಪಾತ್ರವನ್ನು ನೆನಪಿಸುವ ಗುರಿಯೊಂದಿಗೆ ಆಚರಣೆಯನ್ನು ಮುನ್ನಡೆಸಿತು. ಈ ಚಳವಳಿಯು ವಿಶ್ವದ ಅನೇಕ ರಾಷ್ಟ್ರಗಳನ್ನು ಒಟ್ಟುಗೂಡಿಸಿ, ದಯೆ ಎಂಬ ಮಾನವೀಯ ತತ್ವವನ್ನು ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ಆರಂಭವಾಯಿತು.

ಈ ದಿನವನ್ನು ಆಚರಿಸುವುದು ಕೇವಲ ಒಂದು ಸಂಭ್ರಮದ ದಿನವಲ್ಲ, ಅದು ಪ್ರತಿಯೊಬ್ಬರೊಳಗಿನ ಮಾನವೀಯತೆಯನ್ನು ಪುನರುಜ್ಜೀವನಗೊಳಿಸುವ ಕ್ಷಣವಾಗಿದೆ. ನಾವು ಅಲ್ಪ ಮಟ್ಟಿನ ಸಹಾಯ ಮಾಡಿದರೂ, ಯಾರಾದರೊಬ್ಬರ ಬದುಕಿನಲ್ಲಿ ಸಂತೋಷದ ಬೆಳಕು ಹಚ್ಚಬಹುದು.

ದಯೆ ಕೇವಲ ಮಾತುಗಳಲ್ಲಿ ಇರಬಾರದು, ಅದು ನಮ್ಮ ನಡೆ-ನುಡಿಗಳಲ್ಲಿ ಪ್ರತಿಫಲಿಸಬೇಕು. ವಿಶ್ವ ದಯಾ ದಿನವು ಇದೇ ಸಂದೇಶವನ್ನು ಸಾರುತ್ತದೆ. ದಯೆಯ ಶಕ್ತಿ ವಿಶ್ವವನ್ನು ಹೆಚ್ಚು ಶಾಂತ, ಪ್ರೀತಿಯ ಮತ್ತು ಸಹಾನುಭೂತಿಯಿಂದ ಕೂಡಿದ ಸ್ಥಳವನ್ನಾಗಿಸುತ್ತದೆ. ದಯೆ ಎಷ್ಟೇ ಸಣ್ಣದಾಗಿರಲಿ, ಎಂದಿಗೂ ವ್ಯರ್ಥವಾಗುವುದಿಲ್ಲ ಅನ್ನೋದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ಬೇರೆಯವರಿಗೆ ನಮ್ಮ ಕೈಲಾದ ಸಹಾಯ, ದಯೆ, ಪ್ರೀತಿ ತೋರಿಸೋಣ ಏನಂತೀರಾ?

Must Read

error: Content is protected !!