ಹೊಸದಿಗಂತ ಡಿಜಿಟಲ್ ಡೆಸ್ಕ್:
ದ0ಗೆಯಿಂದ ಕಂಗಾಲಾಗಿ ಶ್ರೀಲಂಕಾದಿಂದ ಮಾಲ್ಡೀವ್ಸ್ಗೆ ಪಲಾಯಗೈದಿರುವ ಅಧ್ಯಕ್ಷ ಗೋಟಬಯ ರಾಜಪಕ್ಸೆ, ಸಿಂಗಾಪುರದತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಶ್ರೀಲಂಕಾದ ‘ಡೈಲಿ ಮಿರರ್’ ಪತ್ರಿಕೆ ವರದಿ ಮಾಡಿದೆ.
ಜೊತೆಗೆ ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲೆಯ ವೆಲಾನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಟಬಯ ಇಳಿದಿದ್ದಾರೆ ಎಂಬುದನ್ನು ಪ್ರಧಾನಮಂತ್ರಿ ಕಚೇರಿ ಕೂಡಾ ದೃಢಪಡಿಸಿದೆ. ಈ ನಡುವೆ ಗೋಟಬಯಗೆ ವಿಸಾ ನೀಡಲು ಅಮೆರಿಕಾ ರಾಯಭಾರ ಕಚೇರಿ ಈಗಾಗಲೇ ನಿರಾಕರಿಸಿದೆ.