Thursday, November 13, 2025

Hair Care | ಈ ಎಣ್ಣೆಯ ಜೊತೆ ಕರ್ಪೂರ ಬೆರೆಸಿ ತಲೆಗೆ ಹಚ್ಚಿ: ಡ್ಯಾಂಡ್ರಫ್ ಮಂಗಮಾಯ!

ಇತ್ತೀಚಿನ ದಿನಗಳಲ್ಲಿ ವಾತಾವರಣದ ಬದಲಾವಣೆ, ಅಸಮರ್ಪಕ ಆಹಾರ ಪದ್ಧತಿ ಮತ್ತು ಒತ್ತಡದಿಂದಾಗಿ ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಲೆಹೊಟ್ಟು, ನೆತ್ತಿಯ ಸೋಂಕು ಅಥವಾ ಒಣ ತಲೆಚರ್ಮ ಈ ಎಲ್ಲವು ಕೂದಲು ಉದುರುವಿಕೆಗೆ ಮೂಲ ಕಾರಣವಾಗಿದೆ. ಆದರೆ ನಿಮಗೆ ಗೊತ್ತೇ? ಮನೆಯಲ್ಲಿ ಲಭ್ಯವಿರುವ ಕರ್ಪೂರವು (Camphor) ಈ ಎಲ್ಲ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ನೀಡಬಲ್ಲದು!

  • ನೆತ್ತಿಯ ಶುದ್ಧೀಕರಣ: ಕರ್ಪೂರವು ಬ್ಯಾಕ್ಟೀರಿಯಾ ಮತ್ತು ಫಂಗಸ್ ವಿರೋಧಿ ಗುಣಗಳಿಂದ ಕೂಡಿದೆ. ಇದು ತಲೆಚರ್ಮದ ಅಶುದ್ಧಿಯನ್ನು ತೆಗೆದುಹಾಕಿ ಸೋಂಕು ತಡೆಯುತ್ತದೆ.
  • ಕೂದಲು ಉದುರುವಿಕೆಗೆ ತಡೆ: ಕರ್ಪೂರವು ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ, ಇದರಿಂದ ಕೂದಲು ಬೇರುಗಳು ಬಲವಾಗಿ ಬೆಳೆಯುತ್ತವೆ. ನಿಯಮಿತವಾಗಿ ಕರ್ಪೂರ ಎಣ್ಣೆ ಹಚ್ಚುವುದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
  • ಬಿಳಿ ಕೂದಲು ತಡೆಗಟ್ಟುವಲ್ಲಿ ಸಹಾಯ: ಕರ್ಪೂರದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲನ್ನು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತವೆ.
  • ತೆಂಗಿನ ಎಣ್ಣೆಯ ಜೊತೆಗೆ: ತೆಂಗಿನ ಎಣ್ಣೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಕರ್ಪೂರ ಪುಡಿ ಸೇರಿಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿದರೆ ಕೂದಲು ಬೆಳೆಯುತ್ತದೆ ಮತ್ತು ನೆತ್ತಿ ಸ್ವಚ್ಛಗೊಳ್ಳುತ್ತದೆ.
  • ಸಾಸಿವೆ ಎಣ್ಣೆಯ ಜೊತೆಗೆ: ಸಾಸಿವೆ ಎಣ್ಣೆಗೆ ಕರ್ಪೂರ ಸೇರಿಸಿ ಬಿಸಿ ಮಾಡಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)
error: Content is protected !!