ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತ ರಾಜಕೀಯ ಸಂಘರ್ಷ, ಇತ್ತ ಪ್ರೀತಿಯ ಉತ್ಕರ್ಷ… ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯ ನಡುವೆಯೇ ಕಾವೇರಿರುವ ಪ್ರತಿಭಟನೆಗಳ ಮಧ್ಯೆ ಜೋಡಿಗಳು ಚುಂಬಿಸುವ ಚಿತ್ರ ಈಗ ಸಖತ್ ವೈರಲ್ ಆಗುತ್ತಿದೆ.
ನ್ಯೂಸ್ವೈರ್ ಈ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಪ್ರಧಾನಿ ಕಚೇರಿ ಸ್ವಾಧೀನಪಡಿಸಿಕೊಳ್ಳಲು ನಡೆದ ಪ್ರತಿಭಟನೆ ಸಂದರ್ಭ ಈ ದಂಪತಿ ಪ್ರೀತಿಯಲ್ಲಿ ಬಿದ್ದು ಚುಂಬಿಸಿಕೊಳ್ಳುತ್ತಿರುವುದು ನೆಟ್ಟಿಗರ ಬಗೆಬಗೆಯ ಕಮೆಂಟ್ ಗಳಿಗೆ ಆಹಾರವಾಗಿದೆ!