ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಿನಿಪ್ರಿಯರ ನಿರೀಕ್ಷೆಯ ಕೇಂದ್ರಬಿಂದುವಾಗಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ನಟ ಮಹೇಶ್ ಬಾಬು ಕಾಂಬಿನೇಷನ್‌ನ ಭವ್ಯ ಚಿತ್ರ ‘ಗ್ಲೋಬ್ ಟ್ರೋಟರ್’ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಪ್ರಿಯಾಂಕಾ ಚೋಪ್ರಾ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅದರಿಂದ ಸಿನಿಮಾ ಕುರಿತು ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ರಾಜಮೌಳಿ ಅವರ ಕಥೆ ಹೇಳುವ ಶೈಲಿಯಂತೆಯೇ, ಪ್ರಿಯಾಂಕಾ ಅವರ ಮಂದಾಕಿನಿ ಪಾತ್ರವೂ ಹಲವು ಶೇಡ್ಸ್‌ನಿಂದ ಕೂಡಿದೆ.
ಸೀರೆಯುಟ್ಟು, ಕೈಯಲ್ಲಿ ಗನ್ ಹಿಡಿದಿರುವ ಪ್ರಿಯಾಂಕಾ ಚೋಪ್ರಾ ಅವರ ಮಂದಾಕಿನಿ ಲುಕ್ ರಾಜಮೌಳಿ ಶೈಲಿಯ ಭಾವನಾತ್ಮಕ ಮತ್ತು ಶಕ್ತಿಯುತ ಸಂಯೋಜನೆಯಾಗಿದೆ. ನಿರ್ದೇಶಕ ರಾಜಮೌಳಿ ಅವರು ಸಾಮಾಜಿಕ ಮಾಧ್ಯಮದಲ್ಲಿ, “ಮಂದಾಕಿನಿಯಾಗಿ ನಿಮ್ಮ ವಿಭಿನ್ನ ಶೇಡ್ಸ್ ನೋಡಲು ಕಾಯುತ್ತಿದ್ದೇನೆ” ಎಂದು ಬರೆಯುವ ಮೂಲಕ ಪಾತ್ರದ ಆಳವನ್ನು ಸೂಚಿಸಿದ್ದಾರೆ.
ಪುರಾಣದ ಪ್ರಕಾರ ಮಂದಾಕಿನಿ ರಾವಣನ ಸಹೋದರಿ, ಆದರೆ ರಾಮ–ಸೀತೆಗೆ ಸಹಾಯ ಮಾಡುವ ಪಾತ್ರ. ಅದೇ ಹಿನ್ನೆಲೆಯ ಪ್ರೇರಣೆಯಿಂದ, ಚಿತ್ರದಲ್ಲಿಯೂ ಪ್ರಿಯಾಂಕಾ ನೆಗೆಟಿವ್ ಶೇಡ್‌ನಲ್ಲಿದ್ದರೂ ಹೀರೋಗೆ ನೆರವಾಗುವ ಶಕ್ತಿಯುತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಾಹಸಮಯ ಚಿತ್ರ ಆಫ್ರಿಕನ್ ಕಾಡಿನ ಹಿನ್ನೆಲೆಯಲ್ಲಿದ್ದು, ಜೇಮ್ಸ್ ಬಾಂಡ್ ಮತ್ತು ಇಂಡಿಯಾನಾ ಜೋನ್ಸ್ ಶೈಲಿಯ ಸನ್ನಿವೇಶಗಳನ್ನು ಒಳಗೊಂಡಿದೆ. ಚಿತ್ರಕ್ಕೆ “ವಾರಣಾಸಿ” ಎಂಬ ಟೈಟಲ್ ಅಂತಿಮವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

