Thursday, November 13, 2025

CINE | ರಚ್ಚು ಆಯ್ತು, ಈಗ ಮೇಘನಾ ಸರದಿ: ‘ಜೈಲರ್ 2’ ನಲ್ಲಿ ಮಿಂಚಲಿರೋ ಸ್ಟಾರ್ ನಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜೈಲರ್ 2’ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಕಾರಣ ನಟಿ ಮೇಘನಾ ರಾಜ್. ಅವರು ಈ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಈಗ ಸಿನಿಪ್ರಿಯರ ಉತ್ಸಾಹವನ್ನು ಹೆಚ್ಚಿಸಿದೆ. ಮೇಘನಾ ಈಗಾಗಲೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ, ಆದರೆ ಅವರ ಪಾತ್ರದ ವಿವರಗಳನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.

‘ಜೈಲರ್ 2’ ಮೂಲಕ ಮೇಘನಾ ರಾಜ್ ಮೊದಲ ಬಾರಿಗೆ ರಜನಿಕಾಂತ್ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ‘ಕೂಲಿ’ ಸಿನಿಮಾದಲ್ಲಿ ರಚಿತಾ ರಾಮ್ ರಜನಿಕಾಂತ್ ಜೊತೆ ನಟಿಸಿದ್ದರು. ಈಗ ಅದೇ ಭಾಗ್ಯ ಮೇಘನಾ ಅವರ ಪಾಲಾಗಿದ್ದು, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಇತ್ತೀಚೆಗೆ ಮೇಘನಾ ಮಲಯಾಳಂ ಚಿತ್ರ ‘ಒಟ್ಟಕೊಂಬನ್’ ನಲ್ಲೂ ಅಭಿನಯಿಸುತ್ತಿದ್ದಾರೆ. ಮ್ಯಾಥ್ಯೂಸ್ ಥಾಮಸ್ ನಿರ್ದೇಶನದ ಈ ಚಿತ್ರದಲ್ಲಿ ಸುರೇಶ್ ಗೋಪಿ ಪ್ರಮುಖ ಪಾತ್ರದಲ್ಲಿದ್ದಾರೆ. ಅದೇ ರೀತಿ ಕನ್ನಡದಲ್ಲಿ ‘ಬುದ್ಧಿವಂತ 2’ ಬಿಡುಗಡೆ ನಿರೀಕ್ಷೆಯಲ್ಲಿದ್ದು, ಶ್ರೀನಗರ ಕಿಟ್ಟಿ ಜೊತೆ ‘ಅಮರ್ತ’ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.

‘ಜೈಲರ್ 2’ ಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ನರಸಿಂಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ಅವರ ಪಾತ್ರ ಪ್ರೇಕ್ಷಕರ ಮನಗೆದ್ದಿತ್ತು. ಈಗ ಆ ಪಾತ್ರದ ಮುಂದುವರಿಕೆ ಹೊಸ ತಿರುವು ತರಲಿದೆ ಎಂದು ಊಹಿಸಲಾಗಿದೆ.

error: Content is protected !!