April 19, 2026
Sunday, April 19, 2026
spot_img

IPL 2026 | ಹರ್ಷಿತ್ ರಾಣಾ ಬದಲಿಗೆ ಹೊಸ ಆಟಗಾರ ಇಲ್ಲ: ಕೆಕೆಆರ್ ಪ್ಲಾನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026 ಹಿನ್ನಲೆಯಲ್ಲಿ ತಂಡಗಳ ಸಿದ್ಧತೆ ಜೋರಾಗಿರುವ ಸಮಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅಚ್ಚರಿಯ ನಿರ್ಧಾರವೊಂದನ್ನು ಕೈಗೊಂಡಿದೆ. ಗಾಯದಿಂದ ಹೊರಗುಳಿದಿರುವ ವೇಗದ ಬೌಲರ್ ಹರ್ಷಿತ್ ರಾಣಾ ಬದಲಿಗೆ ಹೊಸ ಆಟಗಾರರನ್ನು ಸೇರಿಸದೇ ಮುಂದುವರಿಯಲು ಕೆಕೆಆರ್ ತೀರ್ಮಾನಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗಾಯಗೊಂಡ ರಾಣಾಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು, ಟಿ20 ವಿಶ್ವಕಪ್‌ನಿಂದಲೂ ಅವರು ಹೊರಬಿದ್ದಿದ್ದಾರೆ. ಆದರೂ ಕೆಕೆಆರ್ ಮ್ಯಾನೇಜ್‌ಮೆಂಟ್ ತಮ್ಮ ಪ್ರಸ್ತುತ ವೇಗದ ದಾಳಿಯ ಮೇಲೆ ವಿಶ್ವಾಸ ಇಟ್ಟಿದೆ.

ಇದನ್ನೂ ಓದಿ:

ತಂಡದ ಬೌಲಿಂಗ್ ವಿಭಾಗದಲ್ಲಿ ಆಕಾಶ್ ದೀಪ್, ವೈಭವ್ ಅರೋರಾ ಹಾಗೂ ಕಾರ್ತಿಕ್ ತ್ಯಾಗಿ ಸೇರಿದಂತೆ ದೇಶೀಯ ಆಟಗಾರರು ಇದ್ದಾರೆ. ಜೊತೆಗೆ ವಿದೇಶಿ ಆಯ್ಕೆಗಳಲ್ಲಿ ಮತೀಶ ಪತಿರಾನಾ ಮತ್ತು ಬ್ಲೆಸಿಂಗ್ ಮುಜರಬಾನಿ ಇದ್ದಾರೆ. ಮುಜರಬಾನಿ ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಇನ್ನು ಬಾಂಗ್ಲಾದೇಶದ ಮುಸ್ತಫಿಝುರ್ ರಹ್ಮಾನ್ ಬದಲಿಗೆ ಮುಜರಬಾನಿಯನ್ನು ತಂಡ ಸೇರಿಸಿಕೊಂಡಿದ್ದು, ಅವರ ಎತ್ತರ ಮತ್ತು ವೇಗ ಕೆಕೆಆರ್ ಬೌಲಿಂಗ್ ದಾಳಿಗೆ ಹೆಚ್ಚುವರಿ ಬಲ ನೀಡಲಿದೆ. ಒಟ್ಟಾರೆ, ಲಭ್ಯವಿರುವ ಸಂಪನ್ಮೂಲಗಳ ಮೇಲೆಯೇ ಕೆಕೆಆರ್ ಭರವಸೆ ಇಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !