ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ಸೀಸನ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಈಗ ಮುಂದಿನ ಸೀಸನ್‌ಗೆ ಸಿದ್ಧತೆ ಆರಂಭಿಸಿದೆ. ಕಳೆದ ಸೀಸನ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್‌ಸಿಬಿ, ಬಹುತೇಕ ಆಟಗಾರರನ್ನು ಮುಂದಿನ ಸಾಲಿಗೆಯೂ ತಂಡದಲ್ಲೇ ಉಳಿಸಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಆದರೆ ಐಪಿಎಲ್ ನಿಯಮದ ಪ್ರಕಾರ, ಇಬ್ಬರು ತಾತ್ಕಾಲಿಕ ಬದಲಿಯಾಗಿ ಆಯ್ಕೆಯಾದ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಸಾಧ್ಯವಿಲ್ಲ.
ಐಪಿಎಲ್‌ನ ಹೊಸ ನಿಯಮದಂತೆ, ಶಾಶ್ವತ ಬದಲಿಯಾಗಿ ಸೇರಿಸಿದ ಆಟಗಾರರನ್ನು ಮುಂದಿನ ಸೀಸನ್‌ಗೂ ತಂಡದಲ್ಲೇ ಉಳಿಸಬಹುದು. ಆದರೆ ಕೇವಲ ತಾತ್ಕಾಲಿಕ ಬದಲಿಯಾಗಿ ಬಂದವರು ಮುಂದಿನ ಸೀಸನ್‌ಗೆ ಅವಕಾಶ ಪಡೆಯಲು ಅರ್ಹರಲ್ಲ.
ಭಾರತ-ಪಾಕ್ ಯುದ್ಧ ಭೀತಿ ಹಿನ್ನೆಲೆ ಈ ವರ್ಷದ ಸೀಸನ್ ಮುಂದೂಡಲ್ಪಟ್ಟಿತ್ತು. ಈ ಅವಧಿಯಲ್ಲಿ ಆರ್‌ಸಿಬಿಯ ಇಬ್ಬರು ವಿದೇಶಿ ಆಟಗಾರರು — ಜೇಕಬ್ ಬೆಥೆಲ್ ಹಾಗೂ ಲುಂಗಿ ಎನ್‌ಗಿಡಿ — ಲಭ್ಯವಾಗಲಿಲ್ಲ. ಹೀಗಾಗಿ ತಂಡ ತಾತ್ಕಾಲಿಕ ಬದಲಿಯಾಗಿ ಇಬ್ಬರನ್ನು ಆಯ್ಕೆ ಮಾಡಿತು: ಝಿಂಬಾಬ್ವೆಯ ಬ್ಲೆಸಿಂಗ್ ಮುಝರಬಾನಿ ಮತ್ತು ನ್ಯೂಜಿಲೆಂಡ್‌ನ ಟಿಮ್ ಸೈಫರ್ಟ್.
ಮುಝರಬಾನಿ ಕೊನೆಯ ಎರಡು ಪಂದ್ಯಗಳಲ್ಲಿ ಆರ್‌ಸಿಬಿಗೆ ವೇಗದ ಬೌಲಿಂಗ್ ನೆರವು ನೀಡಿದರು. ಆದರೆ ತಾತ್ಕಾಲಿಕ ಬದಲಿಯಾಗಿರುವ ಕಾರಣ ಅವರು ಮುಂದಿನ ಸೀಸನ್‌ನಲ್ಲಿ ರಿಟೈನ್ ಆಗುವುದಿಲ್ಲ.
ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ಬಳಿಕ ಸೈಫರ್ಟ್ ಅವರನ್ನು ಆರ್‌ಸಿಬಿ ಸೇರಿಸಿಕೊಂಡಿತ್ತು. ಅವರ ಪ್ರದರ್ಶನ ಪ್ರಶಂಸನೀಯವಾಗಿದ್ದರೂ ನಿಯಮದ ಪ್ರಕಾರ ಮುಂದಿನ ಸೀಸನ್‌ನಲ್ಲಿ ಸ್ಥಾನ ಸಿಗುವುದಿಲ್ಲ.

