October 2, 2026
Friday, October 2, 2026
spot_img

ಸಮ್ಮರ್‌ ಹೀಟ್‌ ಬೀಟ್‌ ಮಾಡೋಕೆ ರಾಗಿಯೇ ಬೆಸ್ಟ್‌, ಇದೊಂದು ಸ್ವೀಟ್‌ ಒಮ್ಮೆ ಮಾಡಿ ನೋಡ್ತೀರಾ?

ಸಾಮಾಗ್ರಿಗಳು
ರಾಗಿ
ತೆಂಗಿನತುರಿ
ಬೆಲ್ಲ
ಗಸಗಸೆ
ಕೊಬ್ಬರಿ ತುರಿ
ತುಪ್ಪ

ಮಾಡುವ ವಿಧಾನ

ಎಂಟು ಗಂಟೆಗಳ ಕಾಲ ರಾಗಿಯನ್ನು ನೀರಿನಲ್ಲಿ ನೆನೆಸಿ ಇಡಿ
ನಂತರ ಇದರ ಜತೆ ತೆಂಗಿನ ತುರಿಯನ್ನು ಹಾಕಿಕೊಂಡು ಮಿಕ್ಸಿ ಮಾಡಿಕೊಳ್ಳಿ
ಬೆಲ್ಲದ ಪಾಕ ತಯಾರಿಸಿ ಇಟ್ಟುಕೊಂಡಿರಿ
ಮಿಕ್ಸಿ ಮಾಡಿದ ನಂತರ ಕಾಯಿ ಹಾಗೂ ರಾಗಿ ಹಾಲನ್ನು ತೆಳು ಬಟ್ಟೆಯಲ್ಲಿ ಶೋಧಿಸಿಕೊಳ್ಳಿ
ಒಂದೆರಡು ಬಾರಿ ಹೀಗೆ ಮಾಡಿ ರಾಗಿ ಹಾಲನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ, ಜೊತೆಗೆ ಬೆಲ್ಲದ ಪಾಕ ಹಾಕಿ
ಅದು ದಪ್ಪ ಆಗೋವರೆಗೂ ಕೈ ಆಡಿಸುತ್ತಲೇ ಇರಿ, ನಂತರ ರೋಸ್ಟ್‌ ಮಾಡಿದ ಕೊಬ್ಬರಿ ಹಾಗೂ ಗಸಗಸೆಯನ್ನು ಹಾಕಿ
ಆಮೇಲೆ ತುಪ್ಪ ಸವರಿದ ತಟ್ಟೆಗೆ ಇದನ್ನು ಹಾಕಿ ಹರಡಿ, ಮೇಲೆ ಇನ್ನಷ್ಟು ಗಸಗಸೆ ಹಾಕಿ
ತಣ್ಣಗಾಗಲು ಫ್ರಿಡ್ಜ್‌ನಲ್ಲಿ ಇಡಿ, ನಂತರ ಕಟ್‌ ಮಾಡಿಕೊಂಡು ತಿನ್ನಿ, ರುಚಿ ಅದ್ಭುತವಾಗಿ ಇರುತ್ತದೆ.

Must Read