Friday, November 14, 2025

ದೆಹಲಿ ಕಾರ್ ಸ್ಫೋಟ ಕೇಸ್: ತುಮಕೂರಿನ ವ್ಯಕ್ತಿಯ ವಿಚಾರಣೆ

ಹೊಸದಿಗಂತ ವರದಿ, ತುಮಕೂರು :

ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬನ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.

ತುಮಕೂರಿನ ಪಿಎಚ್ ಕಾಲೋನಿ ನಿವಾಸಿ ಮುಜಾಯುದ್ದಿನ್ ನನ್ನು ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ನಡೆದ ಮರುದಿ‌ನ ತುಮಕೂರಿನಲ್ಲಿ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.

ಎಎಸ್ ಪಿ ಪುರುಷೋತ್ತಮ್ ರಿಂದ ಎರಡು ಗಂಟೆಗಳ ಕಾಲ‌ ವಿಚಾರಣೆ ನಡೆಸಿ ಸ್ಫೋಟದಲ್ಲಿ ಕೈವಾಡ ಇಲ್ಲದೆ ಇದ್ದು ಘಟನೆಯಲ್ಲಿ ಭಾಗಿಯಾಗದ ಬಗ್ಗೆ ಖಾತರಿ ಆದ ನಂತರ ಬಿಟ್ಟು ಕಳಿಸಿದ್ದಾರೆ.

ಈ ಹಿಂದೆ ಈತ ಕಲಿಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ಸಂಘಟನೆ ಮುಖಂಡರಿಗೆ ತುಮಕೂರಿನಲ್ಲಿ ಸಭೆಗೆ ಅವಕಾಶ ‌ಮಾಡಿಕೊಟ್ಟಿದ್ದನು.

ಈ ಪ್ರಕರಣ ಸಂಬಂಧ ಎನ್ ಐ ಎ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿತ್ತು. ಬಳಿಕ ಆರು‌ ವರ್ಷ ಶಿಕ್ಷೆ ಅನುಭವಿಸಿ ದೆಹಲಿಯ ತಿಹಾರ್ ಜೈಲಿನಿಂದ ಹೊರ ಬಂದಿದ್ದ ಮುಜಾಯುದ್ದಿನ್ ತುಮಕೂರಿನಲ್ಲಿ ವಾಸವಿದ್ದಈ ಹಿನ್ನಲೆಯಲ್ಲಿ ದೆಹಲಿ ಸ್ಪೋಟದ ಮರುದಿನ ಖಾಕಿ ಡ್ರಿಲ್ ನಡೆಸಿದೆ.

error: Content is protected !!