Friday, November 14, 2025

ಮುಧೋಳದಲ್ಲಿ ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಪ್ರತಿಭಟನೆ: ಟ್ರಾಕ್ಟರ್‌‌ಗೆ ಬೆಂಕಿ ಹಚ್ಚಿ ರೈತರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಬ್ಬಿಗೆ ಪ್ರತಿ ಟನ್‌ಗೆ 3,500 ರೂ ನಿಗದಿಪಡಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. ಟ್ರ್ಯಾಕ್ಟರ್‌, ಬೈಕ್‌ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು 3,300 ರೂ ಬೆಲೆ ನಿಗದಿಪಡಿಸಿದ್ದು, ಸರ್ಕಾರ ಹೆಚ್ಚುವರಿಯಾಗಿ 50 ಹಾಗೂ ಕಾರ್ಖಾನೆಗಳು 50 ರೂ ನೀಡಲು ಒಪ್ಪಿವೆ. ಈ ನಿರ್ಧಾರವನ್ನು ಗುರಲಾಪುರದಲ್ಲಿ ಕೆಲ ರೈತರು ಒಪ್ಪಿಕೊಂಡರೂ, ಮುಧೋಳದ ರೈತರು ಮಾತ್ರ 3,500 ರೂ. ಬೇಡಿಕೆಗೆ ಪಟ್ಟು ಹಿಡಿದಿದ್ದಾರೆ .

ಮುಧೋಳದಿಂದ ಸಮೀರವಾಡಿ ತೆರಳುವ ಮಧ್ಯೆ ರೈತರು ಕಬ್ಬು ತುಂಬಿದ ಟ್ರಾಕ್ಟರ್ ಮಗುಚಿ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ಟ್ರಾಕ್ಟರ್ ಹೊತ್ತಿ ಉರಿಯುತ್ತಿದ್ದಂತೆ ರೈತರು ನೇರವಾಗಿ ಸಮೀರವಾಡಿ ಕಾರ್ಖಾನೆಗೆ ನುಗ್ಗಿದ್ದಾರೆ. ಕಾರ್ಖಾನೆ ಆವರಣದಲ್ಲಿದ್ದ ಕಬ್ಬು ತುಂಬಿದ ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇಡೀ ಪ್ರದೇಶ ಬೆಂಕಿಯ ಜ್ವಾಲೆಯಲ್ಲಿ ಸುಟ್ಟ ಕರಕರಲಾಗಿದೆ.

20ಕ್ಕೂ ಹೆಚ್ಚು ಟ್ರಾಕ್ಟರ್ ಹೊತ್ತಿ ಉರಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸು ಕಾರ್ಯದಲ್ಲಿ ತೊಡಗಿದೆ. ಆದರೆ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ಬೆಂಕಿ ಜ್ವಾಲೆ ನಿಲ್ಲುತ್ತಿಲ್ಲ. ಹೀಗಾಗಿ ಟ್ರಾಕ್ಟ್ ಹಾಗೂ ಕಬ್ಬು ಸುಟ್ಟು ನಾಶವಾಗಿದೆ. ನೂರಾರು ಟನ್ ಕಬ್ಬು ನಾಶವಾಗಿದೆ. ಅಪಾರ ನಷ್ಟ ಸಂಭವಿಸಿದೆ.

error: Content is protected !!