ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ವಿಲಕ್ಷಣ ಲುಕ್ ಗಳ ಮೂಲಕ ಸದಾ ಸೆನ್ಸೆಷನ್ ಸೃಷ್ಟಿಮಾಡುವ ಬಾಲಿವುಡ್ ನಟ ರಣವೀರ್ ಸಿಂಗ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಮ್ಯಾಗಜೀನ್ ಒಂದಕ್ಕಾಗಿ ಅವರು ಮಾಡಿದ ಫೋಟೋಶೂಟ್ ಒಂದು ಸಖತ್ ಸುದ್ದಿಯಲ್ಲಿದೆ. ಈ ಫೋಟೋಶೂಟ್ ಗಾಗಿ ರಣವೀರ್ ಸಿಂಗ್ ಪೂರ್ತಿ ಬೆತ್ತಲಾಗಿರುವುದು ಸದ್ಯ ಬಿಟೌನ್ ಅಂಗಳದಲ್ಲಿ ʼಹಾಟ್ ಟಾಪಿಕ್ʼ ಆಗಿ ಪರಿಣಮಿಸಿದೆ.
ತನ್ನ ಫ್ಯಾಶನ್ ಗೇಮ್ ವಿಷಯ ಬಂದಾಗ ವಿಲಕ್ಷಣ ಲುಕ್ ಹಾಗೇ ಹೊಸ ಪ್ರಯೋಗಳಿಗೆ ಹೆಸರುವಾಸಿಯಾಗಿರುವ ಈ ನಟ ಸೂಪರ್ ನೇಕೆಡ್ ಶೂಟ್ ನಡೆಸಿ ನೆಟ್ಟಿಗನ್ನು ಉನ್ಮಾದಗೊಳಿಸಿದ್ದಾರೆ. ಹೀಗೇ ಬೆತ್ತಲಾಗಿ ಪೋಸ್ ಕೊಡುವ ಮೂಲಕ ಲೆಜೆಂಡರಿ ನಟ ಹಾಗೂ ಅಮೆರಿಕನ್ ಪಾಪ್ ಸಂಸ್ಕೃತಿಯ ಐಕಾನ್ ಎಂದೇ ಖ್ಯಾತರಾಗಿರುವ ಬರ್ಟ್ ರೆನಾಲ್ಡ್ಸ್ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಪೇಪರ್ ಮ್ಯಾಗಜೀನ್‌ಗಾಗಿ ಚಿತ್ರೀಕರಿಸಲಾದ ಚಿತ್ರವೊಂದರಲ್ಲಿ, ರಣವೀರ್ ಸಂಪೂರ್ಣ ಬೆತ್ತಲಾಗಿ ಕಂಬಳಿಯ ಮೇಲೆ ಮಲಗುವ ಮೂಲಕ ಬರ್ಟ್ ರೆನಾಲ್ಡ್ಸ್ಅವರ ಚಿತ್ರವನ್ನು ಮರುಸೃಷ್ಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಟ “ನನ್ನ ಕೆಲವು ಪ್ರದರ್ಶನಗಳಲ್ಲಿ ನಾನು ಬೆತ್ತಲೆಯಾಗಿದ್ದೇನೆ. ನನ್ನ ಆತ್ಮವೂ ಬೆತ್ತಲಾಗಿದೆ. ನಾನು ಸಾವಿರ ಜನರ ಮುಂದೆ ಬೇಕಾದರೂ ಬೆತ್ತಲಾಗುತ್ತೇನೆ” ಎಂದಿದ್ದಾರೆ. ಈ ಹಿಂದೆಯೂ ಕೂಡ ʼಉಡೇ ದಿಲ್ ಬೇಫಿಕರೇʼ ಹಾಡಿಗೆ ರಣವೀರ್ ಅರೆ ಬೆತ್ತಲಾಗಿ ನರ್ತಿಸಿದ್ದರು.