ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮಗು ದತ್ತು ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಸದ್ಯ 28,663 ಅರ್ಜಿದಾರರು ಕಾಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಾಹಿತಿ ನೀಡಿದ್ದಾರೆ.
ಲೋಕಸಭೆಯಲ್ಲಿ ಈ ಪ್ರಶ್ನೆಗೆ ಉತ್ತರಿಸಿರುವ ಸಚಿವೆ, ಎನ್ಆರ್ಐ ಸೇರಿದಂತೆ 1030 ವಿದೇಶಿ ಅರ್ಜಿದಾರರು ಮಕ್ಕಳನ್ನು ದತ್ತು ಪಡೆಯಲು ನೋಂದಣಿಯಾಗಿದ್ದಾರೆ ಎಂದಿದ್ದಾರೆ.
2021-22 ರಲ್ಲಿ 2,991 ದೇಶದಲ್ಲಿರುವವರು ಹಾಗೂ 414 ವಿದೇಶದಲ್ಲಿ ನೆಲೆಸಿರುವವರು ಭಾರತೀಯ ಅರ್ಜಿದಾರರು ಮತ್ತು ದತ್ತು ಪಡೆಯಲು ಕಾಯುತ್ತಿದ್ದಾರೆ ಎಂದು ಸಚಿವೆ ಸ್ಮೃತಿ ಇರಾನಿ ಮಾಹಿತಿಯನ್ನು ನೀಡಿದ್ದಾರೆ.