Friday, November 14, 2025

CINE | ಸ್ಪಿರಿಟ್ ಶೂಟಿಂಗ್ ಆರಂಭಕ್ಕೆ ಡೇಟ್ ಫಿಕ್ಸ್! ಸಂದೀಪ್ ರೆಡ್ಡಿ ವಂಗಾ ಏನ್ ಹೇಳಿದ್ರು ಕೇಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸ್ಪಿರಿಟ್ ಬಗ್ಗೆ ಕೊನೆಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅಭಿಮಾನಿಗಳಿಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಇತ್ತೀಚಿನ ಜಿಗ್ರಿಸ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್ ಅಂತ್ಯದ ವೇಳೆಗೆ ಸ್ಪಿರಿಟ್ ಶೂಟಿಂಗ್ ಅಧಿಕೃತವಾಗಿ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ.

ಇದಿನವರೆಗೆ ಸಾಕಷ್ಟು ಊಹಾಪೋಹಗಳು ಈ ಚಿತ್ರವನ್ನು ಸುತ್ತಿಕೊಂಡಿದ್ದವು. ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವಿ ಪ್ರಭಾಸ್ ಅವರ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಡಿತ್ತು. ಆದರೆ, ವಂಗಾ ಈ ವದಂತಿಗೆ ನೇರ ತೆರೆ ಎಳೆದಿದ್ದಾರೆ. ಚಿರಂಜೀವಿ ಯಾವುದೇ ರೀತಿಯ ಪಾತ್ರದಲ್ಲೂ ಸ್ಪಿರಿಟ್‌ಗೆ ಸಂಬಂಧಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದೇ ರೀತಿಯಲ್ಲಿ, ದಕ್ಷಿಣ ಕೊರಿಯಾದ ನಟ ಡಾನ್ ಲೀ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಪ್ರಶ್ನೆಗೆ ವಂಗಾ ಸ್ಪಷ್ಟ ಉತ್ತರ ಕೊಟ್ಟಿಲ್ಲ, ಇದು ಹೊಸ ಕುತೂಹಲಕ್ಕೆ ಕಾರಣವಾಗಿದೆ.

ಪ್ರಭಾಸ್ ಈ ಸಿನಿಮಾದಲ್ಲಿ ಐಪಿಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದರ ಲುಕ್ ಟೆಸ್ಟ್ ಶೀಘ್ರದಲ್ಲೇ ನಡೆಯಲಿದೆ. ನಿರ್ದೇಶಕರ ಪ್ರಕಾರ, ಪ್ರಭಾಸ್ ಪಾತ್ರದಲ್ಲಿ ಹೆಚ್ಚಿನ ತೀವ್ರತೆ ಮತ್ತು ವಿಭಿನ್ನ ಅಭಿವ್ಯಕ್ತಿ ಅಗತ್ಯವಿರುವುದರಿಂದ ಅವರ ಲುಕ್‌ನ್ನು ವಿಶೇಷವಾಗಿ ರೂಪಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾದ ಒಂದು ನಿಮಿಷದ ಆಡಿಯೋ ಟೀಸರ್ ಅಭಿಮಾನಿಗಳಿಗೆ ರೋಮಾಂಚನ ಉಂಟುಮಾಡಿದೆ. ಟೀಸರ್‌ನಲ್ಲಿ ಪ್ರಭಾಸ್ ಧ್ವನಿಯಲ್ಲಿ ಕೇಳಿಬರುವ “ಬಾಲ್ಯದಿಂದಲೂ ನನಗೆ ಒಂದು ಕೆಟ್ಟ ಅಭ್ಯಾಸವಿದೆ” ಎನ್ನುವ ಸಾಲು ಚಿತ್ರದ ಟೋನ್‌ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

error: Content is protected !!