Friday, November 14, 2025

ಟಾಕ್ಸಿಕ್‌ ರಿಲೇಷನ್‌ಶಿಪ್‌ನಲ್ಲಿದ್ದೆ, ಗರ್ಲ್‌ಫ್ರೆಂಡ್‌ ಸಿನಿಮಾ ಮನಸ್ಸಿಗೆ ಹತ್ತಿರವಾದ್ದು ಎಂದ ರಶ್ಮಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ದಿ ಗರ್ಲ್‌ಫ್ರೆಂಡ್‌ ಸಿನಿಮಾ ಮೂಲಕ ಹೆಣ್ಣುಮಕ್ಕಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಸಿನಿಮಾ ಈವೆಂಟ್‌ ವೇಳೆ ರಶ್ಮಿಕಾ ನಾನು ಕೂಡ ಒಂದು ಟಾಕ್ಸಿಕ್‌ ರಿಲೇಷನ್‌ಶಿಪ್‌ನಲ್ಲಿ ಇದ್ದೆ. ನನಗೂ ಆ ಸಂಕಟ ಗೊತ್ತು ಎಂದು ಹೇಳಿದ್ದರು.

‘ಗರ್ಲ್​​ಫ್ರೆಂಡ್’ ಸಿನಿಮಾದಲ್ಲಿ ಟಾಕ್ಸಿಕ್ ಸಂಬಂಧದ ಬಗ್ಗೆ ಇದೆ. ಕಥಾ ನಾಯಕಿಯು ಹುಡಗನೊಬ್ಬನ ಪ್ರೀತಿಸುತ್ತಾಳೆ. ಆತನಿಗೆ ಪುರಷ ಅಹಂ ಹೆಚ್ಚಿರುತ್ತದೆ. ನಂತರ ಈ ಸಂಬಂಧ ವಿಷಕಾರಿಯಾಗಿ ಬದಲಾಗುತ್ತದೆ. ಆಗ ಪ್ರೊಫೆಸರ್ ಒಬ್ಬರು ಸಹಾಯಕ್ಕೆ ಬರುತ್ತಾರೆ. ಈ ಸಿನಿಮಾ ಬಗ್ಗೆ ಮಾತನಾಡುವಾಗ ರಶ್ಮಿಕಾ ಹಳೆಯ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಸಿನಿಮಾದ ಕಥೆ ಕೇಳಿದಾಗ ಮೊದಲು ಈ ಚಿತ್ರವನ್ನು ಮಾಡಬೇಕು ಎಂದು ಎನಿಸಿತು. ಕಥಾ ನಾಯಕಿಯ ಜೀವನದಲ್ಲಿ ಏನೆಲ್ಲ ಜರುಗಿದೆಯೋ ಅದರಲ್ಲಿ ಕೆಲವು ಪರಿಸ್ಥಿತಿಗಳು ನನ್ನ ಜೀವನದಲ್ಲೂ ಸಂಭವಿಸಿದೆ. ಆಗ ನನ್ನ ಜೀವನದಲ್ಲಿ ಯಾರೂ ಇರಲಿಲ್ಲ. ಇದೆಲ್ಲ ನನ್ನದೇ ಮಿಸ್ಟೇಕ್ ಎಂದು ಎನಿಸಿತು ಎಂದು ರಶ್ಮಿಕಾ ಹೇಳಿದ್ದಾರೆ.

ಇದಕ್ಕೆ ಜನ ರಕ್ಷಿತ್‌ ಶೆಟ್ಟಿ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ರಕ್ಷಿತ್‌ ರಶ್ಮಿಕಾ ಬಗ್ಗೆ ಎಷ್ಟೆಲ್ಲಾ ಒಳ್ಳೆ ಮಾತನಾಡ್ತಾರೆ ಆದರೆ ರಶ್ಮಿಕಾ ಹೀಗೇಕೆ ಹೇಳ್ತಿದ್ದಾರೆ ಎಂದಿದ್ದಾರೆ. ಆದರೆ ರಶ್ಮಿಕಾ ಫ್ಯಾನ್ಸ್‌ ಆಕೆ ಪರವಾಗಿ ಮಾತನಾಡಿದ್ದಾರೆ. ರಶ್ಮಿಕಾಗೆ ರಕ್ಷಿತ್‌ ಒಬ್ಬರೇ ಬಾಯ್‌ಫ್ರೆಂಡ್‌ ಎಂದು ಹೇಗೆ ಹೇಳ್ತೀರಿ? ಬೇರೆ ರಿಲೇಷನ್‌ಶಿಪ್‌ ಬಗ್ಗೆ ಮಾತನಾಡಿರಬಹುದು ಎಂದಿದ್ದಾರೆ.

error: Content is protected !!