ಪ್ರತಿಯೊಬ್ಬರ ಮನೆಯಲ್ಲಿ ಸುಲಭವಾಗಿ ಸಿಗುವ ನೆಲ್ಲಿಕಾಯಿ ಕೇವಲ ಆರೋಗ್ಯಕ್ಕೆ ಮಾತ್ರ ಅಲ್ಲ, ಚರ್ಮದ ಆರೈಕೆಗೆ ಸಹ ಅದ್ಭುತವಾಗಿ ಕೆಲಸ ಮಾಡುತ್ತದೆ. ರಾಸಾಯನಿಕಗಳಿಲ್ಲದ ಸೌಂದರ್ಯ ಚಿಕಿತ್ಸೆಯನ್ನು ಹುಡುಕುವವರು ನೆಲ್ಲಿಕಾಯಿ ಫೇಸ್ ಪ್ಯಾಕ್ ಬಳಸುವುದು ಅತ್ಯುತ್ತಮ ಆಯ್ಕೆ. ಚರ್ಮವನ್ನು ಒಳಗಿನಿಂದ ಪೋಷಿಸುವ ಸಾಮರ್ಥ್ಯ ಇರುವ ಈ ಹಣ್ಣು, ದಿನನಿತ್ಯ ತೊಂದರೆ ಕೊಡುತ್ತಿದ್ದ ಮೊಡವೆ, ಕಲೆ, ಎಣ್ಣೆಚರ್ಮ ಇತ್ಯಾದಿ ಸಮಸ್ಯೆಗಳನ್ನು ನೈಸರ್ಗಿಕವಾಗಿ ಕಡಿಮೆ ಮಾಡುತ್ತದೆ.
ನೆಲ್ಲಿಕಾಯಿ ಫೇಸ್ ಪ್ಯಾಕ್ ಹಚ್ಚುವುದರಿಂದ ಆಗುವ ಲಾಭಗಳು
- ಕಾಂತಿ ಹೆಚ್ಚಿಸುತ್ತದೆ: ನೆಲ್ಲಿಕಾಯಿಯಲ್ಲಿರುವ ವಿಟಮಿನ್ C ಚರ್ಮದ ಬಣ್ಣವನ್ನು ಪ್ರಕಾಶಮಾನವಾಗಿ ಮಾಡಿ ಡಲ್ ನೆಸ್ ಕಡಿಮೆ ಮಾಡುತ್ತದೆ.
- ಮೊಡವೆ ಕಡಿಮೆಯಾಗುತ್ತದೆ: ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಪಿಂಪಲ್ಸ್ ಮತ್ತು acne marks ನಿಧಾನವಾಗಿ ಕಡಿಮೆಯಾಗುತ್ತವೆ.
- ಕಲೆಗಳು ಮಾಯವಾಗುತ್ತೆ: ಡಾರ್ಕ್ ಸ್ಪಾಟ್ಸ್ ಹಾಗೂ ಪಿಗ್ಮೆಂಟೇಶನ್ ನಿಧಾನವಾಗಿ ಕಡಿಮೆಯಾಗುತ್ತದೆ.
- ಏಜಿಂಗ್ ಲಕ್ಷಣ ಕಡಿಮೆ ಮಾಡುತ್ತದೆ: ಚರ್ಮಕ್ಕೆ ಫರ್ಮ್‌ನೆಸ್ ನೀಡುವುದರ ಮೂಲಕ fine lines ಮತ್ತು wrinkles ಕಾಣಿಸಿಕೊಳ್ಳುವುದನ್ನು ತಡೆಗಟ್ಟುತ್ತದೆ.
- ಎಣ್ಣೆ ನಿಯಂತ್ರಣ: oily skin ಇರುವವರಿಗೆ ಇದು perfect; ಹೆಚ್ಚುವರಿ ಮೊಡವೆ ಕಡಿಮೆ ಮಾಡಿ ಚರ್ಮವನ್ನು ಫ್ರೆಶ್ ಆಗಿ ಇಡುತ್ತದೆ.
ನೆಲ್ಲಿಕಾಯಿ ಫೇಸ್ ಪ್ಯಾಕ್ ಬಳಸೋದು ಹೇಗೆ?
2–3 ತಾಜಾ ನೆಲ್ಲಿಕಾಯಿಗಳನ್ನು ತೆಗೆದು ಬೀಜ ತೆಗೆದು ಪೇಸ್ಟ್ ಮಾಡಿ. ಅದಕ್ಕೆ 1 ಚಮಚ ಹಾಲು ಅಥವಾ 1 ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿ. ತೊಳೆದ ಮುಖಕ್ಕೆ ಸಮವಾಗಿ ಹಚ್ಚಿ 15–20 ನಿಮಿಷ ಬಿಡಿ. ತಣ್ಣೀರಿನಿಂದ ತೊಳೆದು ಸಾಫ್ಟ್ ಟೌಲಿನಿಂದ ಒರೆಸಿಕೊಳ್ಳಿ. ವಾರಕ್ಕೆ 2–3 ಬಾರಿ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತೆ.

