Friday, November 14, 2025

ಮಹಾಘಟಬಂಧನ್‌ಗೆ ‘ಚಾಣಕ್ಯ’ನ ಮಾಸ್ಟರ್ ಸ್ಟ್ರೋಕ್: ಮತದಾರರ ಮನ ಗೆದ್ದ ‘ಐದು ಪಾಂಡವರ’ NDA!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಗೃಹ ಸಚಿವ ಮತ್ತು ಭಾರತೀಯ ರಾಜಕೀಯದ ‘ಚುನಾವಣಾ ಚಾಣಕ್ಯ’ ಎಂದೇ ಖ್ಯಾತಿ ಪಡೆದಿರುವ ಅಮಿತ್‌ ಶಾ ಅವರ ರಾಜಕೀಯ ಭವಿಷ್ಯ ಮತ್ತೊಮ್ಮೆ ನಿಜವಾದಂತೆ ಕಾಣುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಪ್ರಸ್ತುತ ಅಮಿತ್ ಶಾ ಅವರ ಅಂದಾಜಿಗೆ ಅನುಗುಣವಾಗಿ ನಡೆಯುತ್ತಿದ್ದು, ಎನ್‌ಡಿಎ ಮೈತ್ರಿಕೂಟವು 180ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಅಮಿತ್ ಶಾ ಅವರು ನವೆಂಬರ್ 8 ರಂದು ಪೂರ್ಣಿಯಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಶ್ವಾಸ ವ್ಯಕ್ತಪಡಿಸಿದ್ದರು. “ಒಂದು ಕಡೆ ಚದುರಿದ ಮಹಾಘಟಬಂಧನ ಇದ್ದರೆ, ಮತ್ತೊಂದು ಕಡೆ ಐದು ಪಾಂಡವರಂತಿರುವ ಎನ್‌ಡಿಎ ಇದೆ,” ಎಂದು ಅವರು ಹೇಳಿದ್ದರು. ಈಗಾಗಲೇ ಬಿಹಾರದ ಅರ್ಧದಷ್ಟು ಜನರು ತಮ್ಮ ಮತ ಚಲಾಯಿಸಿದ್ದು, ಎನ್‌ಡಿಎ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ ಎಂದು ಅವರು ದೃಢವಾಗಿ ನುಡಿದಿದ್ದರು.

ಇದಕ್ಕೂ ಮುನ್ನ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಮಿತ್ ಶಾ ಅವರು ಎನ್‌ಡಿಎ 160 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು ಎಂದು ಅಂದಾಜಿಸಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದಲ್ಲಿ ಈ ಸಂಖ್ಯೆ 180ಕ್ಕೂ ಹೆಚ್ಚು ತಲುಪುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದರು. ಮತ ಎಣಿಕೆಯು ಸದ್ಯ ಈ ಭವಿಷ್ಯವನ್ನು ಸತ್ಯವೆಂದು ಸಾಬೀತುಪಡಿಸುತ್ತಿದೆ.

error: Content is protected !!