ಹೊಸದಿಗಂತ ಡಿಜಿಟಲ್ ಡೆಸ್ಕ್
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರನೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ. ಸದ್ದಾಂ ಎಂಬ ಈತ ಚಿಕನ್ ಸೆಂಟರ್ ಹೊಂದಿದ್ದನೆಂದು ಹೇಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಬೆಳ್ಳಾರೆಯ ಶಫೀಕ್ (27) ಮತ್ತು ಸವಣೂರಿನ ಝಾಕೀರ್ (29 ಎಂಬವರನ್ನು ಬಂಧಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.
ಪ್ರವೀಣ್ ಹಂತಕರು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಶೋಧ ಮುಂದುವರಿದಿದೆ. ಈಗಾಗಲೇ ಸುಮಾರು 27 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹಂತಕರು ಕೇರಳಕ್ಕೆ ಸೇರಿದವರಿರಬಹುದೆಂಬ ಅನುಮಾನ ಇದ್ದು, ಸ್ಥಳೀಯರು ಈ ಕೃತ್ಯಕ್ಕೆ ಅವರಿಗೆ ಸಹಕರಿಸಿದ್ದರೇ ಅಥವಾ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.