ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಖಾರವಾದ ಬೋಂಡ/ವಡೆ/ ಬಜ್ಜಿ ತಿಂದು ಬೇಜಾರಾಗಿದ್ರೆ ನಾವು ಹೇಳೋ ಹಾಗೆ ಬ್ರೆಡ್ ಐಸ್ಕ್ರೀಂ ಪಕೋಡಾ ಟ್ರೈ ಮಾಡಿ, ಸಂಜೆ ಸ್ನಾಕ್ಸ್ ಆಗಿ ಡಸರ್ಟ್ ಆಗಿ ಒಳ್ಳೆ ರುಚಿಯಾದ ತಿಂಡಿಯಿದು.
ಬೇಕಾಗುವ ಪದಾರ್ಥಗಳು:
ಐಸ್ಕ್ರೀಂ(ನಿಮಗಿಷ್ಟದ ಫ್ಲೇವರ್)
ಬ್ರೆಡ್ ಸ್ಲೈಸ್
ಅರ್ಧ ಕಪ್ ಮೈದಾ
ಕಾಲು ಕಪ್ ಕಾರ್ನ್ ಹಿಟ್ಟು
ಬ್ರಡ್ ಕ್ರಮ್ಸ್
ಎಣ್ಣೆ
ನೀರು
ಮಾಡುವ ವಿಧಾನ:
ನಿಮಿಗಿಷ್ಟವಾದ ಗಟ್ಟಿಯಾದ ಐಸ್ಕ್ರೀಂ ಅನ್ನ ನಿಂಬೆ ಗಾತ್ರದ ಸೈಜ್ ಮಾಡಿ ಒಂದು ಗಂಟೆ ಕಾಲ ಫ್ರೀಜರ್ನಲ್ಲಿಡಿ. ಈಗ ಬ್ರಡ್ ಸ್ಲೈಸ್ ಕಂದು ಬಣ್ಣದ ಭಾಗ ಕತ್ತರಿಸಿ ಸಾಫ್ಟ್ ಆಗಿ ಸ್ವಲ್ಪ ಮೆತ್ತಗೆ ಲಟ್ಟಿಸಿ. ತುದಿಗೆ ನೀರು ಸವರಿ, ಫ್ರೀಜ್ ಮಾಡಿಟ್ಟ ಐಸ್ಕ್ರೀಂ ಉಂಡೆಯನ್ನು ಬ್ರೆಡ್ ಮೇಲೆ ಇಟ್ಟು ಅದರ ಮೇಲೆ ಮತ್ತೊಂದು ಬ್ರೆಡ್ ಇಟ್ಟು ಸ್ಟಫ್ ಮಾಡಿ ಐದು ಗಂಟೆ ಕಾಲ ಮತ್ತೆ ಫ್ರೀಜ್ ಮಾಡಿ. ಈಗ ಒಂದು ಬಟ್ಟಲಿಗೆ ಮೈದಾ/ಕಾರ್ನ್ ಹಿಟ್ಟು ನೀರು ಹಾಕಿ ಉಂಡೆಯಿಲ್ಲದಂತೆ ಸ್ವಲ್ಪ ತೆಳುವಾಗಿ ಕಲಸಿ ಅದಕ್ಕೆ ಫ್ರೀಜ್ ಮಾಡಿಟ್ಟ ಬ್ರೆಡ್/ಐಸ್ಕ್ರೀಂ ಸ್ಟಫ್ ಅದ್ದಿ, ಬ್ರೆಡ್ ಕ್ರಮ್ಸ್ನಲ್ಲಿ ಹೊರಳಾಡಿಸಿ ಸರಿಯಾಗಿ ಕಾದ ಎಣ್ಣೆಯಲ್ಲಿ ಕರಿದರೆ ಐಸ್ಕ್ರೀಂ ಪಕೋಡಾ ಸವಿಯಲು ಸಿದ್ಧ.