Friday, November 14, 2025

‘ಮೋದಿ ಮಂತ್ರ’ಕ್ಕೆ ಮಾರ್ದನಿಸಿದ ದೆಹಲಿ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಭರ್ಜರಿ ಬಹುಮತ ಸಾಧಿಸಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಿಯವರ ಆಗಮನದೊಂದಿಗೆ, ಇಡೀ ಕಚೇರಿಯ ವಾತಾವರಣವೇ ರೋಮಾಂಚನಗೊಂಡಿತು. ‘ಮೋದಿ… ಮೋದಿ…’ ಎಂಬ ಜಯಘೋಷ ಮೊಳಗಿ, ವಿಜಯೋತ್ಸವದ ಸಂಭ್ರಮಕ್ಕೆ ವೇದಿಕೆ ಸಿದ್ಧವಾಯಿತು. ಉತ್ಸಾಹಭರಿತ ಕಾರ್ಯಕರ್ತರತ್ತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಬಳಸುತ್ತಿದ್ದ ಸಾಂಕೇತಿಕ ಶೈಲಿಯಲ್ಲಿ ಸ್ಕಾರ್ಫ್ ಬೀಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಈ ವಿಜಯದ ಕ್ಷಣದಲ್ಲಿ, ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಹಿರಿಯ ನಾಯಕರು ಪ್ರಧಾನಿಯವರನ್ನು ಗೌರವಿಸಿದರು. ಕೇಂದ್ರ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯವಾಗಿ ಸನ್ಮಾನ ಮಾಡಿ, ಬಿಹಾರ ಗೆಲುವಿನ ರೂವಾರಿಯನ್ನು ಅಭಿನಂದಿಸಿದರು. ಈ ಮೂಲಕ, ಬಿಹಾರದ ಗೆಲುವಿನ ಸಂಭ್ರಮವು ರಾಷ್ಟ್ರ ರಾಜಧಾನಿಯಲ್ಲಿ ಮತ್ತಷ್ಟು ಇಮ್ಮಡಿಯಾಯಿತು.

error: Content is protected !!