ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೀರ್ ಖಾನ್ ತಮ್ಮ ಹೊಸ ಪ್ರಾಜೆಕ್ಟ್ ಲಾಲ್ ಸಿಂಗ್ ಚಡ್ಡಾದೊಂದಿಗೆ 4 ವರ್ಷಗಳ ನಂತರ ಚಲನಚಿತ್ರಗಳಿಗೆ ಮರಳುತ್ತಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರವು ಆಗಸ್ಟ್ 11, 2022 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಕುರಿತು ಇತ್ತೀಚಿನ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಬಿಡುಗಡೆಯ ಮೊದಲು ಚಲನ ಚಿತ್ರವನ್ನು ಬಹಿಷ್ಕರಿಸುತ್ತಿರುವ ಕುರಿತು ಅಮೀರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎನ್ನುವ ಮೂಲಕ ಬಾಲಿವುಡ್ ಚಿತ್ರವನ್ನು ಬಹಿಷ್ಕರಿಸುತ್ತಿರುವುದು ಅವರಿಗೆ ನೋವುಂಟು ಮಾಡಿದೆ ಎಂದಿದ್ದಾರೆ.
ಅಮೀರ್ ಖಾನ್ ತಮ್ಮ ಮುಂಬರುವ ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮದ ಟ್ರೆಂಡ್ ಕುರಿತು ಮಾತನಾಡಿ ಜನರು ಬಾಲಿವುಡ್ ಮತ್ತು ಲಾಲ್ ಸಿಂಗ್ ಚಡ್ಡಾವನ್ನು ಬಹಿಷ್ಕರಿಸುವ ಬಗ್ಗೆ ಮಾತನಾಡುವಾಗ ಅದು ಅವರಿಗೆ ‘ನೋಯಿಸುತ್ತದೆ’ ಎಂದಿದ್ದಾರೆ. “ಹೌದು, ನನಗೆ ಬೇಸರವಾಗಿದೆ. ಅಲ್ಲದೆ, ಇದನ್ನು ಹೇಳುತ್ತಿರುವ ಕೆಲವರು ತಮ್ಮ ಹೃದಯದಲ್ಲಿ ನಾನು ಭಾರತವನ್ನು ಇಷ್ಟಪಡದವನು ಎಂದು ನಂಬುತ್ತಾರೆ. ಇದು ನನಗೆ ನೋವುಂಟು ಮಾಡುತ್ತದೆ. ಆದರೆ ಇದು ಸುಳ್ಳು. ಅದಕ್ಕಿಂತ ಹೆಚ್ಚಾಗಿ ಕೆಲವರಿಗೆ ಹಾಗೆ ಅನಿಸುವುದು ದುರದೃಷ್ಟಕರ, ಹಾಗಲ್ಲ, ದಯವಿಟ್ಟು ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ, ದಯವಿಟ್ಟು ನನ್ನ ಸಿನಿಮಾ ನೋಡಿ,” ಎಂದು ಅಮೀರ್ ಹೇಳಿದ್ದಾರೆ.