ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮುಂಗಾರು ಮತ್ತೆ ಚುರುಕಾಗಿದೆ. ಭಾನುವಾರ ರಾತ್ರಿಯಿಡೀ ಮಳೆ ಸುರಿದಿದ್ದು,ಸೋಮವಾರ ಹಗಲು ವೇಳೆ ಬಿಸಿಲು ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿತ್ತು. ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 38.20 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ 71.10 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ17.20 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 26.30 ಮಿ.ಮೀ. ಮಳೆ ಬಿದ್ದಿದೆ.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದಮ್ವಯ ಮಡಿಕೇರಿ ಕಸಬಾ 11.20, ನಾಪೋಕ್ಲು 80, ಸಂಪಾಜೆ 105, ಭಾಗಮಂಡಲ 88.20, ವೀರಾಜಪೇಟೆ ಕಸಬಾ 7.60, ಹುದಿಕೇರಿ 13, ಶ್ರೀಮಂಗಲ 3.20, ಪೊನ್ನಂಪೇಟೆ 25, ಅಮ್ಮತ್ತಿ 10, ಬಾಳೆಲೆ 44.40, ಸೋಮವಾರಪೇಟೆ ಕಸಬಾ 39, ಶನಿವಾರಸಂತೆ 28.40, ಶಾಂತಳ್ಳಿ 8, ಕೊಡ್ಲಿಪೇಟೆ 12.20, ಕುಶಾಲನಗರ 58, ಸುಂಟಿಕೊಪ್ಪ 12.20 ಮಿ.ಮೀ. ಮಳೆಯಾಗಿದೆ.
ಈ ಬಾರಿ ಅಧಿಕ ಮಳೆ: ವರ್ಷಾರಂಭದಿಂದ ಇದುವರೆಗೆ ಮಡಿಕೇರಿ ತಾಲೂಕಿನಲ್ಲಿ ಸರಾಸರಿ 2841.05 ಮಿ.ಮೀ, (ಕಳೆದ ವರ್ಷ ಇದೇ ಅವಧಿಯಲ್ಲಿ 2367.51 ಮಿ.ಮೀ.) ವೀರಾಜಪೇಟೆ ತಾಲೂಕಿನಲ್ಲಿ 1516.82 ಮಿ.ಮೀ.(1409.98 ಮಿ.ಮೀ.) ಸೋಮವಾರಪೇಟೆ ತಾಲೂಕಿನಲ್ಲಿ 1597.59 (1382.73 ಮಿ.ಮೀ.) ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 1976.39 ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1720.07 ಮಿ.ಮೀ ಮಳೆಯಾಗಿತ್ತು.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸೋಮವಾರ ಜಲಾಶಯದ ನೀರಿನ ಮಟ್ಟವನ್ನು 2858.02 ಅಡಿಗಳಿಗೆ ಕಾಯ್ದಿರಿಸಿಕೊಂಡು ನದಿಗೆ 1687 ಕ್ಯುಸೆಕ್ ಹಾಗೂ ನಾಲೆಗೆ 20 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 2855.44 ಅಡಿಗಳಷ್ಟಿದ್ದರೆ, ಜಲಾಶಯದಿಂದ ನದಿಗೆ 4,220 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್’ನಷ್ಟಿತ್ತು. ಪ್ರಸಕ್ತ ಜಲಾಶಯಕ್ಕೆ 2,795 ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ಕಳೆದ ವರ್ಷ ಇದೇ ದಿನಾಂಕದಂದು ಒಳಹರಿವು 4,100 ಕ್ಯುಸೆಕ್’ನಷ್ಟಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ